ಬೆಂಗಳೂರು: ಉಪಚುನಾವಣೆಯ ಗೆಲುವಿನ ಬಳಿಕ ಇದೀಗ ಸಿಎಂ ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ವಿಸ್ತರಣೆ ಮಾಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ.
ಹೌದು. ಈ ಮೊದಲು 4ನೇ ಡಿಸಿಎಂ ಹುದ್ದೆಗಾಗಿ ರಮೇಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ಪಟ್ಟು ಹಿಡಿದಿದ್ದು, ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಗೊಂದಲಕ್ಕೀಡಾಗಿದ್ದರು. ಆದರೆ ಇದೀಗ ಪ್ರಮುಖ ಖಾತೆಯಾದ ಜಲಸಂಪನ್ಮೂಲ ಖಾತೆ ತಮಗೆ ನೀಡಬೇಕೆಂದು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಆದರೆ ರಮೇಶ್ ಜಾರಕಿಹೊಳಿಗೆ ಈ ಖಾತೆ ನೀಡಲು ಕೆಲವು ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದು, ಇದು ತುಂಬಾ ಜವಾಬ್ದಾರಿಯುತ ಖಾತೆಯಾಗಿದ್ದು, ಅಂತರ್ ರಾಜ್ಯ ಸಮಸ್ಯೆ ಬಂದಾಗ ಅದನ್ನು ನಿರ್ವಹಿಸಲು ರಮೇಶ್ ಜಾರಕಿಹೊಳಿಗೆ ಕಷ್ಟವಾಗುತ್ತದೆ. ಹಾಗಾಗಿ ಈ ಖಾತೆ ನೀಡಬೇಡಿ ಎಂದು ಸಿಎಂ ಗೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.