ಬೆಳಗಾವಿ : ಇಂದಿನಿಂದ ಆರಂಭವಾದ ಸಮ್ಮಿಶ್ರ ಸರ್ಕಾರದ ವರ್ಷದ ಮೊದಲ ಅಧಿವೇಶನಕ್ಕೆ ಅತೃಪ್ತ ಶಾಸಕರು ಗೈರು ಹಾಜರಾಗುತ್ತಾರೆ ಎಂಬ ಆತಂಕ ಇದೀಗ ಕಾಂಗ್ರೆಸ್ ನವರಿಗೆ ಶುರುವಾಗಿದೆ.
ಇಂದಿನಿಂದ ವಿಧಾನಸೌಧದಲ್ಲಿ ನಡೆಯಲಿರುವ ಅಧಿವೇಶನಕ್ಕೆ ಎಲ್ಲಾಶಾಸಕರು ಕಡ್ಡಾಯವಾಗಿ ಹಾಜರಾಗುವಂತೆ ವಿಪ್ ಜಾರಿ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಅತೃಪ್ತ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಅನಾರೋಗ್ಯದ ಕಾರಣದಿಂದ ಸದನಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಸ್ಪೀಕರ್ ಗೆ ಪತ್ರ ಬರೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಒಂದು ವೇಳೆ ವಿಪ್ ಉಲ್ಲಂಘನೆ ವಿಚಾರದಲ್ಲಿ ಕ್ರಮಕ್ಕೆ ಮುಂದಾದರೆ ತಕ್ಷಣ ಬೆಂಗಳೂರಿಗೆ ಬಂದು ಅತೃಪ್ತ ಶಾಸಕರು ರಾಜೀನಾಮೆ ನೀಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.