ಬೆಂಗಳೂರು : ಇಂದಿನಿಂದ ಸಮ್ಮಿಶ್ರ ಸರ್ಕಾರದ ವರ್ಷದ ಮೊದಲ ಅಧಿವೇಶನ ಶುರುವಾಗಿದ್ದು, ಈ ಅಧಿವೇಶನಕ್ಕೆ ಅತೃಪ್ತ ಶಾಸಕರು ಹಾಜರಾಗುತ್ತಾರೋ?ಇಲ್ಲವೋ? ಎಂಬ ಕುತೂಹಲ ಹಲವರಲ್ಲಿ ಮೂಡಿದೆ.
ಇಂದಿನಿಂದ 10 ದಿನ ನಡೆಯುವ ಜಂಟಿ ಅಧಿವೇಶನದ ಮೊದಲ ದಿನ ರಾಜ್ಯಪಾಲ ವಜುಬಾಯಿ ವಾಲಾ ಅವರು ಬೆಳಗ್ಗೆ 11 ಗಂಟೆಗೆ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಶುಕ್ರವಾರ ಮಧ್ಯಾಹ್ನ 12.30 ಕ್ಕೆ ಸಿಎಂ ಕುಮಾರಸ್ವಾಮಿ ಅವರು 2019-20 ನೇ ಸಾಲಿನ ಅಯವ್ಯಯ ಮಂಡಿಸಲಿದ್ದಾರೆ.
ಅಲ್ಲದೇ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸದಿರಲು ಬಿಜೆಪಿ ನಿರ್ಧಾರ ಮಾಡಿದೆ ಎನ್ನಲಾಗಿದೆ. ಆದರೆ ಭಾಷಣದಲ್ಲಿರುವ ಋಣಾತ್ಮಕ ಅಂಶಗಳನ್ನು ಎತ್ತಿಹಿಡಿಯುವುದಾಗಿ, ಹಾಗೇ ಲೋಕಸಭಾ ಚುನಾವಣೆವರೆಗೂ ಅದನ್ನು ಜೀವಂತವಾಗಿಡುವುದಾಗಿ ಬಿಜೆಪಿ ನಿರ್ಧಾರ ಮಾಡಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.