Publish Date: Mon, 25 May 2020 (12:47 IST)
Updated Date: Mon, 25 May 2020 (12:50 IST)
ಕೊರೊನಾ ಭೀತಿ ಹಿನ್ನಲೆಯಲ್ಲಿ ಈ ವರ್ಷ ರಂಜಾನ್ ಹಬ್ಬದ ಆಚರಣೆಯನ್ನು ಈದ್ಗಾ ಮೈದಾನದಲ್ಲಿ ನಡೆಸದೇ ಮನೆ ಮನೆಗಳಲ್ಲೇ ಪ್ರಾರ್ಥನೆ ಮಾಡುವ ಮೂಲಕ ಆಚರಿಸಲಾಯಿತು.
ಪ್ರತಿ ವರ್ಷ ರಂಜಾನ್ ಹಬ್ಬದ ದಿನ ಸಾವಿರಾರು ಮುಸ್ಲೀಂ ಬಾಂಧವರಿಂದ ಕೂಡಿರುತ್ತಿದ್ದ ಬಳ್ಳಾರಿ ನಗರದ ಈದ್ಗಾ ಮೈದಾನ ಸಾಮೂಹಿಕ ಪ್ರಾರ್ಥನೆ ನಿಷೇಧದಿಂದ ಬಿಕೋ ಎನ್ನುತ್ತಿತ್ತು.
ಮೈದಾನದಲ್ಲಿ ಯಾರೂ ಬರದಂತೆ ನೋಡಿಕೊಳ್ಳಲು ಇದ್ದ ಪೊಲೀಸ್ ಸಿಬ್ಬಂದಿ ಬಿಟ್ಟರೆ ಬೇರೆ ಯಾರೋಬ್ಬರು ಇರಲಿಲ್ಲ.
ಇಡೀ ಮೈದಾನದಲ್ಲಿ ಸುತ್ತಲೂ ಪೊಲೀಸರ ಸರ್ಪಗಾವಲು ಇತ್ತು. ಇತ್ತ ಸರಕಾರ ಮತ್ತು ತಮ್ಮ ಗುರುಗಳ ಆದೇಶದಂತೆ
ಸ್ವಯಂ ಪ್ರರಣೆಯಿಂದ ಮುಸ್ಲಿಂರು ಹೊರಗೆ ಬರದೆ, ಮನೆಯಲ್ಲಿ ಪ್ರಾರ್ಥನೆ ಮಾಡಿದ್ದು ಕಂಡು ಬಂತು.