Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸೇರಿದವರು ರಾಮಮಂದಿರ ವಿರೋಧಿಗಳು : ಶೆಟ್ಟರಿಗೆ ಶೋಭಾ ಟಾಂಗ್

Ram Mandir opponents joined Congress: Shobha Tong to Shettar
bangalore , ಬುಧವಾರ, 19 ಏಪ್ರಿಲ್ 2023 (17:15 IST)
ಜಗದೀಶ ಶೆಟ್ಟರ್ ಅವರು ಧ್ವಜ ಬದಲಿಸಿದರೆ ಅವರ ವಿಚಾರವೂ ಬದಲಾಗುವುದೇ ಎಂದು  ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಶ್ನಿಸಿದ್ದಾರೆ.ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿಗರು ಲಿಂಗಾಯತರನ್ನು ಒಡೆಯಲು ಮುಂದಾಗಿದವರು,ಕಾಂಗ್ರೆಸ್‍ನಲ್ಲಿ ಈಗಾಗಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ಹಲವು ಮುಖ್ಯಮಂತ್ರಿ ಅಭ್ಯರ್ಥಿಗಳಿದ್ದಾರೆ. ಹಾಗಿದ್ದಾಗ ಶೆಟ್ಟರ್ ಅವರ ಸ್ಥಾನ ಏನು  ಎಂಬುದನ್ನು ಅವ್ರೆ ಹೇಳಬೇಕು ಎಂದು ಟೀಕಿಸಿದ್ರು....ಜಗದೀಶ್ ಶೆಟ್ಟರು ಹಿರಿಯ ನಾಯಕರು ಎಂದು ಗೌರವಿಸಿದ್ದೇವೆ. ರಾಮಮಂದಿರಕ್ಕಾಗಿ ಹೋರಾಟ ಮಾಡಿದ್ದೀರಿ. ನೀವೂ ರಾಮಮಂದಿರಕ್ಕಾಗಿ ಇಟ್ಟಿಗೆ ಹೊತ್ತವರು. ಕಾಂಗ್ರೆಸ್‍ನವರು ರಾಮಮಂದಿರ ವಿರೋಧಿಗಳು. ಕಾಂಗ್ರೆಸ್‍ನ ಕಪಿಲ್ ಸಿಬಲ್ ರಾಮಮಂದಿರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸಿದವರು. ಅಂಥ ಪಕ್ಷಕ್ಕೆ ನೀವು ಇಂದು ನೀವು ಸೇರಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆ‌ಯಲ್ಲಿ ಪುಂಡರ ಗಲಾಟೆ