ಮಾಜಿ ಸಂಸದೆ, ನಟಿ ರಮ್ಯಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಟ್ವೀಟ್ ವಾರ್ ವಿಚಾರಕ್ಕೆ ಸಂಬಂಧಿಸಿದಂತೆ ನಲಪಾಡ್ ರಮ್ಯಾ ವಿರುದ್ಧ ಪ್ರತಿಕ್ರಿಯಿಸಿದ್ದಕ್ಕೆ ದೊಡ್ಡವರ ಮಾತಿನ ನಡುವೆ ನಾವು ತಲೆ ಹಾಕುವುದು ಬೇಡ ಎಂದು ರಕ್ಷಾ ರಾಮಯ್ಯ ನಲಪಾಡ್ಗೆ ಬುದ್ದಿವಾದ ಹೇಳಿದ್ದಾರೆ. ರಮ್ಯಾ ಮತ್ತು ಡಿ.ಕೆ.ಶಿವಕುಮಾರ್ ವಿಚಾರವಾಗಿ ನಲಪಾಡ್ ಮಾತನಾಡಿದ್ದರು. ಇದಕ್ಕೆ ರಮ್ಯಾ ಖಾರವಾಗಿಯೆ ಪ್ರತಿಕ್ರಿಯೆ ನೀಡಿದ್ರು.ಇನ್ನು ಇವರ ಮಧ್ಯೆ ಟ್ವೀಟ್ ವಾರ್ ಮುಂದುವರೆದಿತ್ತು. ಈ ಕುರಿತು ದೊಡ್ಡವರು ಮಾತನಾಡುವುದು ಆಂತರಿಕ ವಿಷಯ.ಇದನ್ನು ನಾವು ವಿಮರ್ಶೆ ಮಾಡಿದ್ರೆ ಬೇರೆ ಅರ್ಥ ಆಗುತ್ತೆ. ಹಾಗಾಗಿ ಚಿಕ್ಕವರು ಸಾರ್ವಜನಿಕವಾಗಿ ಮಾತನಾಡುವುದು ಬೇಡ ಎಂದು ರಕ್ಷಾ ರಾಮಯ್ಯ ನಲಪಾಡ್ಗೆ ಕಿವಿಮಾತು ಹೇಳಿದ್ದಾರೆ.