ಕಾಂಗ್ರೆಸ್ ಮುಖಂಡ ಉಗ್ರಪ್ಪ ಹಾಗೂ ಸಲೀಂ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಮಿಷನ್ ದಂಧೆ ನಡೆಸುತ್ತಿದ್ದು, ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಸಂಭಾಷಣೆ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ಇಬ್ಬರು ಪ್ರತ್ಯೇಕವಾಗಿ ದೂರು ನೀಡಿದ್ದಾರೆ.
`ಹೆಲ್ಪಿಂಗ್ ಸಿಟಿಜನ್ ಆ್ಯಂಡ್ ಪೀಪಲ್ಸï ಕೋರ್ಟ್' ಎನ್‍ಜಿಒ ಸಂಸ್ಥಾಪಕ ಅಲಂ ಪಾಷ ಹಾಗೂ ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಕೆಂಚನಹಳ್ಳಿ ಎಸಿಬಿಗೆ ದೂರು ನೀಡಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಅಲಂಪಾಷ ಅವರು ಡಿ.ಕೆ.ಶಿವಕುಮಾರ್, ಕೆಪಿಸಿಸಿ ಮಾಜಿ ಮಾಧ್ಯಮ ಕಾರ್ಯದರ್ಶಿ ಎಂ.ಎ. ಸಲೀಂ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿ 13 ಮಂದಿ ವಿರುದ್ಧ ದೂರು ನೀಡಿದ್ದಾರೆ.
ಸಲೀಂ ಹಾಗೂ ಉಗ್ರಪ್ಪ ಸಂಭಾಷಣೆ ಸತ್ಯಕ್ಕೆ ಹತ್ತಿರವಾಗಿದ್ದು, ಜಲಸಂಪನ್ಮೂಲ ಇಲಾಖೆ ಸಚಿವರಾಗಿz್ದÁಗ ಶಿವಕುಮಾರ್ ಭ್ರಷ್ಟಾಚಾರವೆಸಗಿದ್ದಾರೆ. ಡಿಕೆಶಿ 8 ರಿಂದ 12 ಪರ್ಸೆಂಟ್ ಕಮಿಷನ್ ಪಡೆದಿz್ದÁರೆ. ಭ್ರಷ್ಟಾಚಾರದ ಮೂಲಕ 2023ರ ಚುನಾವಣೆಗಾಗಿ ಕೋಟ್ಯಂತರ ರೂ. ಸಂಪಾದಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಡಿಕೆಶಿ ಭ್ರಷ್ಟಾಚಾರದ ಬಗ್ಗೆ ಸಂಪೂರ್ಣವಾಗಿ ಗೊತ್ತಿದೆ. ಅಕ್ರಮದ ಬಗ್ಗೆ ಗೊತ್ತಿದ್ದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ದೂರಿನಲ್ಲಿ ಅಲಂಪಾಷ ಆರೋಪಿಸಿದ್ದಾರೆ.
ಡಿಕೆಶಿಗೆ ಬೇನಾಮಿ ಆಸ್ತಿ:
ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಕೆಂಚನಹಳ್ಳಿ ಅವರು ಡಿ.ಕೆ. ಶಿವಕುಮಾರ್ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ದೂರು ನೀಡಿದ್ದಾರೆ. ಡಿಕೆಶಿ ನಡೆಸಿರುವ ಅಕ್ರಮವು ಉಗ್ರಪ್ಪ ಮತ್ತು ಸಲೀಂ ಸಂಭಾಷಣೆಯಿಂದ ತಿಳಿದು ಬಂದಿದೆ.
ಡಿ.ಕೆ ಶಿವಕುಮಾರ್ ಶೇ 12ರಷ್ಟು ಕಮಿಷನ್ ಪಡೆಯುತ್ತಾರೆ ಎಂದಿz್ದÁರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಿನಲ್ಲಿ ಡಿಕೆಶಿ ಬೇನಾಮಿ ಆಸ್ತಿ ಮಾಡಿz್ದÁರೆ. ಚಿಕ್ಕನಾಯಕನಹಳ್ಳಿಯಲ್ಲಿ ಬೇನಾಮಿ ಆಸ್ತಿ ಹೊಂದಿz್ದÁರೆ. ಸೋಲಾರ್ ಪ್ಲಾಂಟ್‍ಗಳಲ್ಲಿ ಅಕ್ರಮ ಹಣ ಸಂಪಾದಿಸಿದ್ದಾರೆ. ಹೆಂಚಿನ ಫ್ಯಾಕ್ಟರಿ ಬೇನಾಮಿ ಹೆಸರಿನಲ್ಲಿದೆ. ಕೃಷ್ಣಮೂರ್ತಿಯ ಹೆಸರಿನಲ್ಲಿ 100 ಕೋಟಿ ಬೇನಾಮಿ ಆಸ್ತಿ ಹೊಂದಿz್ದÁರೆ ಎಂದು ರವಿಕುಮಾರ್ ಆರೋಪಿಸಿದ್ದಾರೆ.