Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಯಲಹಂಕ ನಿವಾಸಿಗಳಾದ ಮಂಜುನಾಥ್ (27) ಮತ್ತು ಪತ್ನಿ ವೇದಾವತಿ (25) ಬಂಧಿತರು.ಬಂಧಿತರಿಂದ ಇಟಿಯೋಸ್ ಕಾರ್ ಮತ್ತು ಎರಡು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಮನೆ ತೊರೆದಿದ್ದ ದಂಪತಿಗೆ ಉಳಿದುಕೊಳ್ಳಲು ಸ್ಥಳ ಇರಲಿಲ್ಲ. ಹೀಗಾಗಿ ಕಾರ್ ಕಳ್ಳತನ ಮಾಡಿದ್ದ ದಂಪತಿ ದಿನವಿಡೀ ಸುತ್ತಾಡಿ, ರಾತ್ರಿ ಅದರಲ್ಲಿಯೇ ಉಳಿದುಕೊಳ್ಳುತ್ತಿದ್ದರು
ರಾತ್ರಿ 10.30ಕ್ಕೆ ಓಲಾ ಕ್ಯಾಬ್ ಬುಕ್ ಮಾಡಿದ್ದ ದಂಪತಿ ಚಾಲಕ ಶಿವಶಂಕರ್ಗೆ ಮುಂಗಡ ಹಣ ಪಾವತಿಸಿದ್ದರು. ಈ ಮೂಲಕ ತಾವು ಸಭ್ಯರಂತೆ ನಟಿಸಿದ್ದರು
ಚಾಲಕನನ್ನು ಹಿಂಬದಿ ಆಸನದಲ್ಲಿ ಕೂರಿಸಿ ಮಂಜುನಾಥ್ ಕಾರ್ ಚಾಲನೆ ಮಾಡಿದ್ದಾನೆ. ನಂತರ ಕೆಲ ಸಮಯ ನಗರದಲ್ಲಿ ಸುತ್ತಾಡಿದ್ದಾರೆ.
ಕಲುವರಾಯನಹಳ್ಳಿಯ ಬಳಿ ಚಾಲಕ ಶ್ರೀನಿವಾಸ್ನನ್ನು ಹೊರಗೆ ತಳ್ಳಿ ಕಾರ್ ಸಮೇತ ಎಸ್ಕೇಪ್ ಆಗಿದ್ದಾರೆ. ಕಾರ್ ಕಳ್ಳತನ ಬಳಿಕ ಶ್ರೀನಿವಾಸ್ ಸ್ನೇಹಿತರ ಸಲಹೆ ಮೇರೆಗೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು
ಕಾರ್ ನಂಬರ್ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಮಂಜುನಾಥ್ ವಿರುದ್ಧ ಒಂದು ಕೊಲೆ, ನಾಲ್ಕು ಕೊಲೆ ಯತ್ನ, ದರೋಡೆ, ಕಳ್ಳತನ ಸೇರಿ 16 ಪ್ರಕರಣ ದಾಖಲಿಸಿಕೊಳ್ಳಲಾಗಿದೆ.