Publish Date: Tue, 06 Jun 2023 (20:13 IST)
Updated Date: Tue, 06 Jun 2023 (20:18 IST)
ನಗರದಲ್ಲಿ ಸಂಜೆಯ ವೇಳೆಗೆ ಗಾಳಿ ಸಹಿತ ಬರೀ ಮಳೆ ಸುರಿಯುತ್ತಿದೆ.ಗಿರಿನಗರ,ಹೊಸಕೆರೆಹಳ್ಳಿ,ಬಸವನಗುಡಿ, ಸ್ಯಾಟಲೈಟ್, ಮೈಸೂರು ರಸ್ತೆ ಯಲ್ಲಿ ಭಾರಿ ಮಳೆಯಾಗಿದೆ.ಸತತ ಎರಡು ಗಂಟೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.ಗುಡುಗು ಸಹಿತ ಭಾರಿ ಮಳೆಯಾಗ್ತಿದೆ.
ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರಕ್ಕೆ ಜನ ಥಂಡಿ ಹೊಡೆದಿದ್ದಾರೆ. ವಾಹನಸವಾರರಿಗೆ ಮಳೆ ಎಫೆಕ್ಟ್ ನಿಂದ ಮನೆಗೆ ತೆರಳಲಾಗದೇ ಪರದಾಟ ನಡೆಸಿದ್ದಾರೆ.ಮಳೆಯಿಂದಾಗಿ ನಗರದ ಹಲವು ಕಡೆ ಫುಲ್ ಟ್ರಾಫಿಕ್ ಜಾಮ್ ಸಂಭವಿಸಿದೆ.ಜಿಟಿ ಜಿಟಿ ಮಳೆಯಿಂದಾಗಿ ಬೈಕ್ ಸವಾರರ ಪರದಾಟ ನಡೆಸಿದ್ದಾರೆ.ಕಾರ್ಪೊರೇಷನ್ ಕೆಆರ್ ಸರ್ಕಲ್ ಮೆಜೆಸ್ಟಿಕ್ ನಲ್ಲಿ ಟ್ರಾಫಿಕ್ ಜಾಮ್ ಆಗಿದೆ.