Select Your Language

Notifications

webdunia
webdunia
webdunia
webdunia

ಮುಂಗಾರು ತಡವಾದರೂ ಉತ್ತಮ ಮಳೆಯಾಗಲಿದೆ : ಹವಾಮಾನ ಇಲಾಖೆ

ಮುಂಗಾರು ತಡವಾದರೂ ಉತ್ತಮ ಮಳೆಯಾಗಲಿದೆ : ಹವಾಮಾನ ಇಲಾಖೆ
ಬೆಂಗಳೂರು , ಮಂಗಳವಾರ, 6 ಜೂನ್ 2023 (10:54 IST)
ಬೆಂಗಳೂರು : ಮುಂಗಾರು ಮಾರುತ ಕೇರಳಕ್ಕೆ ಇನ್ನೂ ಪ್ರವೇಶಿಸದ ಹಿನ್ನೆಲೆ ಕರ್ನಾಟಕಕ್ಕೆ ಮುಂಗಾರು ಮಳೆ ತಡವಾಗಿ ಎಂಟ್ರಿ ಕೊಡಲಿದೆ. ಆದರೂ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞರು ಹೇಳಿದ್ದಾರೆ.
 
ಕೇರಳಕ್ಕೆ ಮುಂಗಾರು ಪ್ರವೇಶ ಒಂದು ವಾರ ವಿಳಂಬವಾಗಲಿದೆ. ಈ ರಾಜ್ಯಕ್ಕೆ ಮುಂಗಾರು ಎಂಟ್ರಿಯಾದ ಮೂರು ನಾಲ್ಕು ದಿನಗಳಲ್ಲಿ ಕರ್ನಾಟಕಕ್ಕೆ ಎಂಟ್ರಿ ಕೊಡಲಿದೆ. ಆದರೆ ಇದರಿಂದ ಯಾವುದೇ ಸಮಸ್ಯೆ ಆಗದು. ಉತ್ತಮ ಮಳೆಯಾಗಲಿದೆ ಎಂದರು.

ಮುಂಗಾರು ಮಾರುತಗಳು ಇಂದು ಕೂಡ ಕೇರಳಕ್ಕೆ ಪ್ರವೇಶಿಸಲು ವಿಫಲವಾಗಿದೆ. ಮುಂಗಾರು ಮಳೆ ನಿಗದಿತ ದಿನಕ್ಕಿಂತ ಇನ್ನೂ ಮೂರ್ನಾಲ್ಕು ದಿನ ತಡವಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞ ಪ್ರಸಾದ್ ಹೇಳಿದ್ದಾರೆ. ದಕ್ಷಿಣ ಅರಬ್ಬೀ ಸಮುದ್ರದಲ್ಲಿ ಮಾರುತ ಚಲನೆ ವೇಗ ಪಡೆದುಕೊಂಡಿದೆ. ಹೀಗಾಗಿ ಮಂದಿನ 3-4 ದಿನದಲ್ಲಿ ಮುಂಗಾರು ಮಾರುತ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ಮೊದಲ ಬಜೆಟ್ ಅಧಿವೇಶನ ಜುಲೈ 3ರಿಂದ ಆರಂಭ