Publish Date: Fri, 23 Nov 2018 (15:39 IST)
Updated Date: Fri, 23 Nov 2018 (15:41 IST)
ರಾಜಧಾನಿ ಹೊರವಲಯದ ಆನೇಕಲ್ ತಾಲೂಕಿನಾದ್ಯಂತ ಜಿಟಿ ಜಿಟಿ ಮಳೆ ಸುರಿದಿದೆ.
ಆನೇಕಲ್ ತಾಲೂಕಿನಾದ್ಯಂತ ಮುಂಜಾನೆಯಿಂದಲೂ ಜಿಟಿ ಜಿಟಿ ಸುರಿದಿದೆ. ಮಳೆಯಿಂದಾಗಿ ಉಲ್ಲಾಸಕರ ವಾತಾವರಣ ನಿರ್ಮಾಣವಾಗಿತ್ತು. ನಿನ್ನೆಯಿಂದಲೂ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಆದರೆ ಇಂದು ಮಳೆ ಆರಂಭಗೊಂಡಿತು. ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆ ಸುರಿಯತೊಡಗಿತು.
ಮಳೆಯಲ್ಲೇ ನಿತ್ಯ ಕಾರ್ಯಗಳಿಗೆ ಸಾರ್ವಜನಿಕರು ತೆರಳುತ್ತಿರುವ ಚಿತ್ರಣ ಕಂಡುಬಂದಿತು. ಅಂಗಡಿ ಬಸ್ ಶೆಲ್ಟರ್ ಗಳಲ್ಲಿ ನಿಂತು ಮಳೆಯಿಂದ ಬೈಕ್ ಸವಾರರು ರಕ್ಷಣೆ ಪಡೆಯುತ್ತಿದ್ದರು. ಜಿಟಿ ಮಳೆ ಜನರಲ್ಲಿ ಖುಷಿಗೆ ಕಾರಣವಾಯಿತು.