ಬೆಂಗಳೂರು : ಮಳೆಗಾಲದಲ್ಲಿ ಆಗಾಗ ಮಳೆ ಸುರಿಯುತ್ತಿರುವ ಕಾರಣ ಬಟ್ಟೆಗಳು ಸರಿಯಾಗಿ ಒಣಗುವುದಿಲ್ಲ. ಆಗ ಬಟ್ಟೆಯನ್ನು ಫ್ಯಾನಿನ ಸಹಾಯದಿಂದ ಒಣಗಿಸುತ್ತಿದ್ದರು. ಇದರಿಂದ ಹೊಲಸು ವಾಸನೆ ಬರುತ್ತದೆ. ಮಳೆಗಾಲದಲ್ಲಿ ಬಟ್ಟೆಯ ವಾಸನೆ ಬರುವುದನ್ನು ತಡೆಯಲು ಈ ವಿಧಾನ ಅನುಸರಿಸಿ.
*ಬಟ್ಟೆಗಳನ್ನು ಮಡಚಿಡುವ ಜಾಗದಲ್ಲೆಲ್ಲ ಒಂದೆರಡು ಕರ್ಪೂರದ ಮಾತ್ರೆಗಳನ್ನು ಇಟ್ಟಿರಿ. ಕರ್ಪೂರ ಕ್ರಿಮಿನಾಶಕಗಳಂತೆ ಕಾರ್ಯ ನಿರ್ವಹಿಸುವುದಲ್ಲದೇ,ಬಟ್ಟೆಗಳಲ್ಲಿರುವ ತೇವವನ್ನು ಹೀರಿಕೊಂಡು, ಬಟ್ಟೆಯನ್ನು ತಾಜಾವಾಗಿಸುವುದು.
* ಸರ್ಫಿನೊಂದಿಗೆ ವಿನೆಗರ್ ಮತ್ತು ಬೇಕಿಂಗ್ ಸೋಡಾಗಳ ಮಿಶ್ರಣ ಮಾಡಿ ನೆನೆಸಿಡುವುದರಿಂದ ಬಟ್ಟೆಯಲ್ಲಿರುವ ಕೆಟ್ಟ ವಾಸನೆಗಳನ್ನು ಹೋಗಲಾಡಿಸುವುದಲ್ಲದೆ, ಬಟ್ಟೆಗೆ ಶುಭ್ರ ಹಾಗೂ ತಾಜಾ ಸುಗಂಧವನ್ನು ನೀಡುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.