Publish Date: Thu, 03 May 2018 (10:48 IST)
Updated Date: Thu, 03 May 2018 (12:16 IST)
ನವದೆಹಲಿ: ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಕರ್ನಾಟಕದ ರೈತರಿಗೆ ನಿಮ್ಮ ಕೊಡುಗೆ ಏನು ಎಂದು ರಾಹುಲ್ ಪ್ರಶ್ನೆ ಮಾಡಿರುವುದಲ್ಲದೆ, ಕರ್ನಾಟಕದ ರೈತರಿಗೆ ಪ್ರಧಾನಿ ಮೋದಿ ಸರ್ಕಾರದ ಕೊಡುಗೆ ಬಗ್ಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ.
‘ಕರ್ನಾಟಕದ ರೈತರಿಗೆ ನಿಮ್ಮ ಕೊಡುಗೆ ಏನು? ಪ್ರಧಾನ ಮಂತ್ರಿ ವಿಮಾ ಯೋಜನೆಯಿಂದ ರೈತರಿಗೆ ಲಾಭವಾಗಿಲ್ಲ. ಖಾಸಗಿ ವಿಮಾ ಸಂಸ್ಥೆಗಳು ಲಾಭ ಮಾಡಿಕೊಂಡಿವೆ. ಕಾಂಗ್ರೆಸ್ ಸರ್ಕಾರ 8,500 ಕೋಟಿ ರೂ. ಸಾಲ ಮನ್ನಾ ಮಾಡಿತ್ತು. ನಿಮ್ಮದು ಅದರಲ್ಲೂ ಶೂನ್ಯ ಸಾಧನೆ. ಹಾಗಾಗಿ ಅಂತಿಮ ಶ್ರೇಣಿ ಎಫ್’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.