ಬೆಂಗಳೂರು: ಪ್ರಧಾನಿ ಮೋದಿ ಬಿಜೆಪಿ ಸಮಾವೇಶದಲ್ಲಿ ತಮ್ಮನ್ನು ಹೊಗಳಿದರೂ ಅದಕ್ಕೆ ವಿಶೇಷ ಮನ್ನಣೆ ಕೊಡದಿರಲು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನಿರ್ಧರಿಸಿದ್ದಾರೆ.
‘ಒಬ್ಬ ಕನ್ನಡಿಗ ಪ್ರಧಾನಿಯಾಗಿರುವುದು ನಾಡಿಗೇ ಹೆಮ್ಮೆಯ ವಿಷಯವಾಗಿತ್ತು. ಆದರೆ ಅದಕ್ಕೆ ಕಳಂಕ ತರಲು ಸಿದ್ದರಾಮಯ್ಯ ಹೊರಟಿದ್ದನ್ನು ತಪ್ಪು ಎಂದು ಮೋದಿ ಹೇಳಿದರಷ್ಟೇ. ಇದಕ್ಕೆ ವಿಶೇಷ ಅರ್ಥ ಬೇಡ. ಇದರ ಅರ್ಥ ನಾವು ಮೈತ್ರಿ ಮಾಡಿಕೊಳ್ಳಲಿದ್ದೇವೆ ಎಂದಲ್ಲ’ ಎಂದು ದೇವೇಗೌಡರು ಹೇಳಿದ್ದಾರೆ.
‘2004 ರಲ್ಲಿ ಸಿದ್ದರಾಮಯ್ಯರಿಗೆ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಬೇಕೆಂಬ ಮನಸ್ಸಿತ್ತು. ಆದರೆ ನಾನು ಅವಕಾಶ ಕೊಡಲಿಲ್ಲ. ಅದಕ್ಕೇ ಈಗ ಹೀಗೆಲ್ಲಾ ಸುಳ್ಳು ಸುದ್ದಿ ಹರಿಯಬಿಡುತ್ತಿದ್ದಾರೆ’ ಎಂದು ದೇವೇಗೌಡರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.