Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಗದೀಶ್ ಶೆಟ್ಟರ್ ಗೆ ಆರ್ ಅಶೋಕ್ ತಿರುಗೇಟು

ಜಗದೀಶ್ ಶೆಟ್ಟರ್ ಗೆ ಆರ್ ಅಶೋಕ್ ತಿರುಗೇಟು
bangalore , ಮಂಗಳವಾರ, 29 ಆಗಸ್ಟ್ 2023 (21:00 IST)
ಪಾರ್ಲಿಮೆಂಟ್ ಇಲೆಕ್ಷನ್ ಆದಮೇಲೆ ಈ ಸರ್ಕಾರ ಇರಲ್ಲ ಅಂತ ಭಯ ಕಾಂಗ್ರೆಸ್ ಗೆ ಮತ್ತೆ ಮೋದಿ ಬಂದರೆ ಈ ಸರ್ಕಾರ ಇರುವುದಿಲ್ಲ.ಇದು ಸರ್ಕಾರಕ್ಕೆ ನೂರು ದಿನಗಳ ಕರಾಳ ದಿನಗಳು.ಒಂದೇ ಒಂದು ಅಭಿವೃದ್ಧಿ ಯೋಜನೆ ಆಗ್ತಾ ಇಲ್ಲ.ನಗರ ಪ್ರದೇಶಗಳಲ್ಲಿ ಕಸ ವಿಲೇವಾರಿ ಆಗಿಲ್ಲ.ಎಲ್ಲ ಕಡೆ ಗುತ್ತಿಗೆದಾರರು ಕೆಲಸ ನಿಲ್ಲಿಸಿದ್ದಾರೆ.ಕಳೆದ ನೂರು ದಿನಗಳಲ್ಲಿ ಅಭಿವೃದ್ಧಿ ಕುಂಠಿತ ಅಲ್ಲ ಸ್ಟಾಪ್ ಆಗಿದೆ.ನಮ್ಮ ಸರ್ಕಾರ ಎಲ್ಲಿಗೆ ನಿಂತಿತ್ತೋ ಅಲ್ಲಿಗೇ ನಿಂತಿದೆ ಈ ಸರ್ಕಾರ.ಹೊಸ ಯೋಜನೆಗಳು ಯಾವುದೂ ಆಗ್ತಾ ಇಲ್ಲ.ಬೆಂಗಳೂರಂತ ನಗರದಲ್ಲೇ ಲೋಡ್ ಶೆಡ್ಡಿಂಗ್ ಆಗ್ತಿದೆ.ಉಚಿತ ವಿದ್ಯುತ್ ನೀಡಲು ಲೋಡ್ ಶೆಡ್ಡಿಂಗ್ ಅಭಿವೃದ್ಧಿ ಪರವಾದ ಒಂದೇ ಒಂದು ಸ್ಟೇಟಮೆಂಟ್ ಇಲ್ಲ.ರಾಜ್ಯದ ಎಲ್ಲ ಗುತ್ತಿಗೆದಾರರು ಪ್ರತಿಭಟನೆ ಮಾಡ್ತಾ ಇದ್ದಾರೆ.ತನಿಖೆ ಮಾಡಿ ಬಿಲ್ ಕೊಡಿ ಅಂತ ಸಿಎಂ ಹೇಳಿದ್ದಾರಂತೆಪಾಪ ಗುತ್ತಿಗೆದಾರರು ಮೋಸ ಹೋಗಿದ್ದಾರೆ.ಬಿಲ್ ಕೊಡೋಕಾಗದೇ ತನಿಖೆ ತನಿಖೆ ಅಂತ ಹೇಳ್ತಿದ್ದಾರೆ.ದುಡ್ಡಿಲ್ಲ ಅನ್ನೋ ಕಾರಣಕ್ಕೆ ಎಲ್ಲ ಸ್ಟಾಪ್ ಮಾಡಿದ್ದಾರೆ.ತನಿಖೆ ನೆಪದಲ್ಲಿ ಸ್ಟಾಪ್ ಮಾಡಿದ್ದಾರೆ.೩೦-೩೫ ಮಂತ್ರಿಗಳಿದ್ದಾರೆ ಸಾವಿರಾರಿ ಇಂಜಿನಿಯರ್ ಗಳಿದ್ದಾರೆ.ಕರ್ನಾಟಕದಲ್ಲಿ ಇರುವ ಎಲ್ಲ ಇಂಜಿನಿಯರ್ ಗಳು ಗುತ್ತಿಗೆದಾರರು ಕಳ್ಳರು ಅಂತಂದ್ರೆ?೧೦% ತಪ್ಪಿರಬಹುದು, ೨೦% ತಪ್ಪಿರಬಹುದು, ೪೦-೫೦% ತಪ್ಪಿರಬಹುದು ಎಲ್ಲವೂ ತಪ್ಪಿರಬಹುದು ಎಂದು ಆರ್ ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಪಾರ್ಲಿಮೆಂಟ್ ಇಲೆಕ್ಷನ್ ಆದಮೇಲೆ ಈ ಸರ್ಕಾರ ಇರಲ್ಲ ಅಂತ ಭಯ ಅವರಿಗೆ ಮತ್ತೆ ಮೋದಿ ಬಂದರೆ ಈ ಸರ್ಕಾರ ಇರುವುದಿಲ್ಲ.ಇದೇ ಜಗದೀಶ್ ಶೆಟ್ಟರ್ ನಮ್ಮಲ್ಲಿ ಇದ್ದಾಗ ನಾಲ್ಕು ಬಾರಿ ಸರ್ಕಾರದ ವಿರುದ್ದ ಚಾರ್ಜ್ ಶೀಟ್ ಮಾಡಿದ್ರು.ಆಗ ಅವರಿಗೆ ಕೆಲಸ ಇಲ್ಲದೆ ಚಾರ್ಜ್ ಶೀಟ್ ಮಾಡಿದ್ರಾ?ಆಗ ಕೆಲಸ ಇಲ್ಲದೆ ಮಾಡಿದ್ರೆ ಈಗಲೂ ಹಾಗೆ ಅಂದುಕೊಳ್ಳಲಿ ಎಂದು ಮಾಜಿ ಸಚಿವ ಆರ್ ಅಶೋಕ್ ಜಗದೀಶ್ ಶೆಟ್ಟರ್ ಗೆ ಟಾಂಗ್ ನೀಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಆಪರೇಷನ್ ಅಸ್ತ ಬೇಕಿಲ್ಲ- ಸಲೀಂ ಅಹ್ಮದ್