ಸಮಯ ಪ್ರಜ್ಞೆ ರಾಜಕೀಯ ಪ್ರಜ್ಞೆ ಎರಡೂ ನಮಗಿದೆ. ಪ್ರೋಟೋ ಕಾಲ್ ಫಾಲೋ ಮಾಡೋದು ನಮಗೆ ಗೊತ್ತು. ನಾವು ಸಿದ್ದರಿದ್ದೆವು ಆದರೆ ಪಿಎಂ ಆಫೀಸ್ ನಿಂದ ನಮಗೆ ಫೋನ್ ಬಂದಿತ್ತು. ನಾವು ಯಾರೂ ಬರೋದು ಬೇಡ ಇದೆ ಅಂತ ಹೇಳಿದ್ರು ಎಂದುವಡಿ ಕೆ ಶಿವಕುಮಾರ್ ಆರ್ ಅಶೋಕ್ ಗೆ ತಿರುಗೇಟು ನೀಡಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಹೊರಟ ರಾಜ್ಯ ಕ್ರಮವನ್ನು ರಾಜಕೀಯ ಎಂದಿದ್ದ ಕೇಂದ್ರ ಸಚಿವೆ ಶೋಭಾಕರಂದ್ಲಾಗೆ ನೀರಾವರಿ ಸಚಿವ,ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ರು.ಶೋಭಕ್ಕನವರಿಗೆ ರಾಜ್ಯದ ಹಿತ ಕಾಪಾಡಬೇಕು ಅನ್ನೋ ಮನಸ್ಸಿದ್ದರೆ ನಮ್ಮ ಜೊತೆ ನಿಯೋಗದಲ್ಲಿ ಬಂದು ಪ್ರಧಾನಿ ಭೇಟಿಯಾಗಲಿ.ಈ ಹಿಂದೆಯೇ ನಾವು ಅವರನ್ನು ಸಭೆಗೆ ಕರೆದಿದ್ದುವು. ಪಾಪ ಅವರಿಗೆ ಆಗ ಬರಲಾಗಲಿಲ್ಲವೇನೋ,ಪ್ರಧಾನಿಗಳು ಸಮಯ ಕೊಟ್ಟಾಗ ನಾವು ಅವರನ್ನು ಭೇಟಿ ಮಾಡಿ ನಮ್ಮ ವಾದ ಮಂಡಿಸುತ್ತೇವೆ. ಕಾವೇರಿ ವಿಚಾರದಲ್ಲಿ ರೈತರ ಹಿತ ಕಾಪಾಡುವ ಹಾಗೂ ಕೋರ್ಟ್ ಆದೇಶ ಪಾಲಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ನಾವದನ್ನು ಪಾಲಿಸುತ್ತಿದ್ದೇವೆ. ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಮುಂದಿನ ಕಾನೂನೂ ಹೋರಾಟಕ್ಕೂ ಸಿದ್ದರಾಗುತ್ತಿದ್ದೇವೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.