Publish Date: Sun, 06 Nov 2022 (17:47 IST)
Updated Date: Sun, 06 Nov 2022 (17:49 IST)
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಅಧಿಕವಾಗಿದ್ದು, ಹಲವು ಜೀವಗಳನ್ನು ಬಲಿ ಪಡೆದಿವೆ. ಎಷ್ಟು ಜನರು ಜೀವತೆತ್ತರೂ ಸಹ BBMP ಎಚ್ಚೆತ್ತುಕೊಂಡಿಲ್ಲ. ರಸ್ತೆ ಗುಂಡಿ ಬಗ್ಗೆ ಬಾಲಕಿ ವಿಡಿಯೋ ಮಾಡಿದ್ದು, ಅಧಿಕಾರಿಗಳಿಗೆ ಪುಟಾಣಿ ಚಳಿ ಬಿಡಿಸಿದ್ದಾಳೆ. ಕೆಲಗುಂಡಿಗಳು ಅಧಿಕ ತೂಕದ ವಾಹನ ಚಲಿಸುವುದರಿಂದ ಆದ್ರೆ, ಕೆಲ ಗುಂಡಿಗಳು ಕಾಮಗಾರಿ ಉದ್ದೇಶದಿಂದಾಗಿ ನಿರ್ಮಾಣ ಆಗಿರ್ತವೆ. ರಸ್ತೆ ಮಾಡಿ ಒಂದು ತಿಂಗಳು ಆಯ್ತು. ಮತ್ತೆ ರೋಡ್ನ್ನ ಹೊಂಡ ಮಾಡ್ತಿದ್ದಾರೆ. ನಮಗೆಲ್ಲ ಎಷ್ಟು ಕಷ್ಟ ಆಗ್ತಿದೆ ನೋಡಿ ಸ್ವಲ್ಪ ಎಂದು ಪುಟಾಣಿ ವಿಡಿಯೋದಲ್ಲಿ ಪ್ರಶ್ನಿಸಿದ್ದಾಳೆ. ಮುಖ್ಯಮಂತ್ರಿಗಳೇ ಈ ಕಡೆ ನೋಡಿ ಸ್ವಲ್ಪ, ಎಂದು ಗಮನ ಸೆಳೆದಿದ್ದಾಳೆ. ರಸ್ತೆ ಮಾಡುವುದು ನೀವೇ? ಹೊಂಡ ಮಾಡೋದು ನೀವೇ ಎಂದು ಮುಖ್ಯಮಂತ್ರಿಗಳ ವಿರುದ್ಧ ಬಾಲಕಿ ಆಕ್ರೋಶ ಹೊರ ಹಾಕಿದ್ದಾಳೆ. ಈಗ ಆ ಪುಟ್ಟ ಬಾಲಕಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.