ಆಡಳಿತ ಪಕ್ಷ ಆಮ್ ಆದ್ಮಿಯ ಶಾಸಕ ಅಮಿತ್ ರತ್ತನ್ ಕೋಟ್ಛಟ್ಟಾ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬ್ ವಿಜಿಲೆನ್ಸ್ ಬ್ಯುರೋ ಪಟಿಯಾಲದಲ್ಲಿ ಬಂಧಿಸಿದೆ. ಸಹಾಯಕ ನಾಲ್ಕು ಲಕ್ಷ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದ. ಈ ಪ್ರಕರಣದಲ್ಲಿ ಬಟಿಂಡಾ ಗ್ರಾಮೀಣ ಕ್ಷೇತ್ರದ ಪ್ರತಿನಿಧಿಯಾಗಿರುವ ಕೋಟ್ಫಟ್ಟಾ ಅವರ ಪಾತ್ರ ಇರುವುದಕ್ಕೆ ಬಲವಾದ ಸಾಕ್ಷಿಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘುದ್ದಾ ಗ್ರಾಮದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಕೋಟ್ಫಟ್ಟಾ ಮತ್ತು ಅವರ ಸಹಾಯಕ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಬಟಿಂಡಾ ನಿವಾಸಿ ಪ್ರೀತ್ಪಾಲ್ ಕುಮಾರ್ ಆರೋಪಿಸಿದ್ದಾರೆ. ಕುಮಾರ್ ನೀಡಿದ ದೂರಿನಲ್ಲಿ ರಶಿಮ್ ಗಾರ್ಗ್ ಅವರನ್ನು ಬಟಿಂಡಾದಲ್ಲಿರುವ ಕೋಟ್ಫಟ್ಟಾ ಅವರ ನಿವಾಸಕ್ಕೆ ಆಹ್ವಾನಿಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ವಾಯ್ಸ್ ರೆಕಾರ್ಡ್‍ನ್ನು ತಮ್ಮ ದೂರಿನೊಂದಿಗೆ ಸಲ್ಲಿಸಿದ್ದರು. ಸರ್ಕಾರದ ಅತಿಥಿ ಗೃಹದಲ್ಲಿ ಗಾರ್ಗ್ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದರು. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಕೋಟ್ಫಾಟ್ಟಾ ಅವರನ್ನು ಪ್ರಶ್ನಿಸಲಾಗಿತ್ತು. ಕೋಟ್ಫಾಟ್ಟಾ ಪರವಾಗಿ ಅವರ ಸಹಾಯಕ ರಶೀಮ್ ಗಾರ್ಗ್ ಲಂಚ ಸಂಗ್ರಹಿಸಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.