Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜ್ಯದಲ್ಲಿ 21 ಅಂಗನವಾಡಿ ತರಬೇತಿ ಕೇಂದ್ರಗಳನ್ನ ಮುಚ್ಚಿರುವ ಬಗ್ಗೆ ಪ್ರತಿಭಟನೆ

ರಾಜ್ಯದಲ್ಲಿ 21 ಅಂಗನವಾಡಿ ತರಬೇತಿ ಕೇಂದ್ರಗಳನ್ನ ಮುಚ್ಚಿರುವ ಬಗ್ಗೆ  ಪ್ರತಿಭಟನೆ
bangalore , ಗುರುವಾರ, 7 ಜುಲೈ 2022 (20:48 IST)
ಕರ್ನಾಟಕ ರಾಜ್ಯದಲ್ಲಿ 21 ಅಂಗನವಾಡಿ ತರಬೇತಿ ಕೇಂದ್ರಗಳನ್ನ ಮುಚ್ಚಿರುವ ಬಗ್ಗೆ ಹಾಗೂ ಕಳೆದ ಮೂರು ವರ್ಷಗಳಿಂದ ತರಬೇತಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ 189 ಜನ ಸಿಬ್ಬಂದಿಗೆ ವೇತನ ನೀಡದಿರುವ ಬಗ್ಗೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯ ಅಧ್ಯಕ್ಷರಾದ  ಜಿ.ಆರ್ ಶಿವಶಂಕರ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಕಳೆದ ಮೂರು ವರ್ಷಗಳಿಂದ ತರಬೇತಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಈ ಕೂಡಲೇ ವೇತನ ನೀಡಬೇಕು,ಅಗತ್ಯವಾಗಿ ತರಬೇತಿ ಕೇಂದ್ರಗಳು ಹೀಗೆ ಮುಂದುವರಿಯಬೇಕು, ಈ ತರಬೇತಿ ಸಿಬ್ಬಂದಿಗಳಲ್ಲಿ ಶೇ 99 ರಷ್ಟು ಮಹಿಳೆಯರೇ ಹೆಚ್ಛಾಗಿ ಕೆಲಸ ಮಾಡುತ್ತಿದ್ದಾರೆ ಹೀಗಾಗಿ ಸರ್ಕಾರ ಎಲ್ಲವನ್ನೂ ಗಮನದಲ್ಲಿಕೊಂಡು ಸಮಸ್ಯೆಗಳನ್ನ ಈ ಕೂಡಲೇ ಪರಿಹರಿಸಬೇಕು ಇಲ್ಲವಾದ್ದಲ್ಲಿ ಮುಂದಿನ ದಿನಗಳಲ್ಲಿ  ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಜಿ.ಆರ್ ಶಿವಶಂಕರ್ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೂಡ್ಸ್ ಶೆಡ್ ರೋಡ್ ಇಂದಿನಿಂದ ಸಂಚಾರಕ್ಕೆ ಮುಕ್ತ