Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅರ್ಚಕರ ಸಮಸ್ಯೆ: ಮುಜರಾಯಿ ಸಚಿವರ ಜತೆ ಚರ್ಚಿಸಿದ ಡಾ.ಸಿ.ಎನ್.ಅಶ್ವತ್ಥನಾರಾಯಣ

ಅರ್ಚಕರ ಸಮಸ್ಯೆ: ಮುಜರಾಯಿ ಸಚಿವರ ಜತೆ ಚರ್ಚಿಸಿದ ಡಾ.ಸಿ.ಎನ್.ಅಶ್ವತ್ಥನಾರಾಯಣ
bangalore , ಗುರುವಾರ, 16 ಸೆಪ್ಟಂಬರ್ 2021 (19:59 IST)
ಬೆಂಗಳೂರು: ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಖಾಲಿ ಇರುವ ಅರ್ಚಕ, ಸಹಾಯಕ ಅರ್ಚಕ, ಸ್ಥಾನಿಕ, ಪಾಚಕ, ಪರಿಚಾರಕ, ವೇದ ಪಾರಾಯಣ, ಪ್ರಬಂಧ ಪಾರಾಯಣ ಮಾಡುವವರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವುದು ಸೇರಿ ಅರ್ಚಕರ ವಿವಿಧ ಸಮಸ್ಯೆಗಳ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರ ಚರ್ಚೆ ನಡೆಸಿದರು. 
 
ತಮ್ಮ ಕಚೇರಿಯಲ್ಲಿ ಗುರುವಾರ ಹಿಂದೂ ದೇವಾಲಯಗಳ ಅಖಿಲ ಕರ್ನಾಟಕ ಅರ್ಚಕ, ಆಗಮಿಕ, ಉಪಾದೀವಂತರ ಒಕ್ಕೂಟದ ಸದಸ್ಯರು ಹಾಗೂ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರ ಸಭೆ ಕರೆದಿದ್ದ ಡಾ.ಅಶ್ವತ್ಥನಾರಾಯಣ ಅವರು; ಕೋವಿಡ್ ನಂತರ ಅರ್ಚಕ ಸಮುದಾಯ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆ ಬಗ್ಗೆ ಕ್ರಮ ಕೈಗೊಳ್ಳಲು ಸಂಬಂಧಿತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. 
 
ವಿಶೇಷವಾಗಿ, ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಅರ್ಚಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಡಾ.ಅಶ್ವತ್ಥನಾರರಾಯಣ ಅವರು ಮುಜರಾಯಿ ಸಚಿವರಿಗೆ ವಿವರಿಸಿದರು. 
 
ದೇವಸ್ಥಾನದ ಹೊರಾಂಗಣ ಮತ್ತು ಒಳಾಂಗಣಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಸಚಿವರಿಬ್ಬರೂ ಮಾಹಿತಿ ಪಡೆದುಕೊಂಡರಲ್ಲದೆ, ಅಗತ್ಯ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲು ಆಯಾ ದೇಗುಲದ ಆಡಳಿತ ಮಂಡಳಿಗೆ ಅಧಿಕಾರ ನೀಡುವುದು, ಎಲ್ಲ ನೇಮಕಗಳನ್ನು ಆಯಾ ದೇಗುಲಗಳ ಪ್ರಧಾನ ಅರ್ಚಕರ ಸಲಹೆಯಂತೆ ಮಾಡುವ ಬಗ್ಗೆ ಚರ್ಚಿಸಿದರು. 
 
ಕೋವಿಡ್ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಎಚ್ಚರ ತಪ್ಪುವುದು ಬೇಡ. ಉತ್ಸವಗಳನ್ನು ದೇವಳದ ಹೊರಗೆ ನಡೆಸುವ ಬದಲು ಒಳಗಿನ ಪ್ರಾಂಗಣದಲ್ಲೇ ನಡೆಸುವುದು ಉತ್ತಮ ಎಂದು ಡಾ.ಅಶ್ವತ್ಥನಾರಾಯಣ ಅವರು ಸಲಹೆ ಮಾಡಿದರು. 
 
ಸಭೆಯಲ್ಲಿ ಹಿರಿಯ ಅರ್ಚಕರು, ಮುಜರಾಯಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
education

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 2 ದಿನ ಭಾರೀ ಮಳೆ