Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

120 ಕಿಮೀ ವೇಗ ಆದೇಶ ಅನೂರ್ಜಿತ ; ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ

120 ಕಿಮೀ ವೇಗ ಆದೇಶ ಅನೂರ್ಜಿತ ; ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ
ಚೆನ್ನೈ , ಬುಧವಾರ, 15 ಸೆಪ್ಟಂಬರ್ 2021 (08:47 IST)
ಚೆನ್ನೈ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಲಿಸುವ ವಾಹನಗಳ ಗರಿಷ್ಠ ವೇಗ ಮಿತಿಯನ್ನು ಗಂಟೆಗೆ 120 ಕಿ.ಮೀ. ಹೆಚ್ಚಿಸಿ ಕೇಂದ್ರ ಸರ್ಕಾರ, 2018ರಲ್ಲಿ ಜಾರಿಗೊಳಿಸಿದ್ದ ಮಾರ್ಗಸೂಚಿಯನ್ನು ಮದ್ರಾಸ್ ಹೈಕೋರ್ಟ್ ಅನೂರ್ಜಿತಗೊಳಿಸಿದೆ. ಜನರ ಸುರಕ್ಷತೆ ದೃಷ್ಟಿಯಲ್ಲಿ ವೇಗ ಮಿತಿ ಇಳಿಕೆ ಮಾಡುವಂತೆ ಸೂಚಿಸಿದೆ.
Photo Courtesy: Google

ನ್ಯಾ.ಎನ್.ಕಿರುಬಾಕರನ್ (ಸದ್ಯ ನಿವೃತ್ತಿಯಾಗಿದ್ದಾರೆ) ಮತ್ತು ನ್ಯಾ.ಟಿ.ವಿ.ತಮಿಳ್ಸೆಲ್ವಿ ಅವರನ್ನೊಳಗೊಂಡ ನ್ಯಾಯಪೀಠ ಇತ್ತೀಚೆಗೆ ಈ ಆದೇಶ ನೀಡಿದೆ.
ನ್ಯಾಯಪೀಠದ ಮುಂದೆ ಕೇಂದ್ರ ಆದೇಶ ಸಮರ್ಥಿಸಿಕೊಂಡಿತ್ತು. ಆಧುನಿಕ ವಾಹನಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಎಂಜಿನ್ಗಳನ್ನು ಅಳವಡಿಸಲಾಗಿದೆ. ಹೀಗಾಗಿ, 120 ಕಿ.ಮೀ. ವೇಗದಲ್ಲಿ ವಾಹನಗಳು ಸಾಗಬಹುದು ಎಂದು ಹೇಳಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಎಂಜಿನ್ಗಳ ಗುಣಮಟ್ಟ, ರಸ್ತೆಗಳ ಗುಣಮಟ್ಟ ಹೆಚ್ಚಾಗಿದ್ದರೂ, ಅನೇಕ ವಾಹನ ಮಾಲೀಕರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸುವುದೇ ಇಲ್ಲ. ಅದರ ಜೊತೆಗೆ, ವೇಗ ಮಿತಿ ಹೆಚ್ಚಿಸಿದರೆ ಮತ್ತಷ್ಟು ಅಪಘಾತಗಳಾಗಬಹುದು’ ಎಂಬ ಆತಂಕ ವ್ಯಕ್ತಪಡಿಸಿ, ಮಿತಿ ಪರಿಷ್ಕರಣೆಗೆ ಸೂಚಿಸಿತು.


Share this Story:

Follow Webdunia kannada

ಮುಂದಿನ ಸುದ್ದಿ

ಜಾರಕಿಹೊಳಿ ಸಿಡಿ ಪ್ರಕರಣ : ವಿಚಾರಣೆ ಮುಂದಕ್ಕೆ