40 ವರ್ಷದ ಡಬಲ್ ಡೇಕರ್ ಬಸ್ ಗಳು ಬೆಂಗಳೂರಿನಲ್ಲಿ ಕಳೆಗಟ್ಟಿದೆ.90 ಆಸನಗಳುಳ್ಳ ಬಿಎಂಟಿಸಿ ಡಬಲ್ ಡೇಕರ್ ಬಸ್ ಗೆ ಟೆಂಡರ್ ಕರೆಯಲಾಗಿದೆ.ಎಲೆಕ್ಟ್ರಿಕ್ ಮಾದರಿಯಲ್ಲಿ ಡಬಲ್ ಡೇಕರ್ ಬಸ್ ಗಳು ಸಿದ್ದವಾಗಲಿವೆ.ಸಧ್ಯದಲ್ಲೇ ಬಿಎಂಟಿಸಿ ಅಧಿಕಾರಿಗಳು ಟೆಂಡರ್ ಫೈನಲ್ ಮಾಡಲಿದ್ದಾರೆ.ಈಗಾಗಲೇ 10 ಬಸ್ ಗಳ ಖರೀದಿಗೆ ಬಿಎಂಟಿಸಿ ನಿಗಮ ಸಿದ್ದತೆ ನಡೆಸಿದೆ.ಪ್ರಸ್ತುತ ಚಾವಣಿ ಮುಚ್ಚಿರುವ ಡಬಲ್ ಡೇಕರ್ ಬಸ್ ಖರೀದಿಗೆ ಬಿಎಂಟಿಸಿ ಪ್ಲ್ಯಾನ್ ನಡೆಸಿದೆ.
ಪ್ರತೀ ಬಸ್ ಗೆ 2.2 ಕೋಟಿ ವೆಚ್ಚ ಬಿಎಂಟಿಸಿ ಮಾಡಲಿದೆ.ಬಿಎಂಟಿಸಿ ಡಬಲ್ ಡೇಕರ್ ಸಂಚರಿಸುವ ರಸ್ತೆಯಲ್ಲಿ ಸರ್ವೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.ಹೊರ ವರ್ತುಲ ರಸ್ತೆಗಳಲ್ಲಿ ಸೇರಿ ಮೋಸ್ಟ್ ಅಟ್ರ್ಯಾಕ್ಷನ್ ರಸ್ತೆಗಳ ಪರಿಶೀಲನೆ ಮಾಡಿ ಎಂದು ಸಾರಿಗೆ ಸಚಿವರು ಹೇಳಿದ್ದಾರೆ.ರಾಮಲಿಂಗಾರೆಡ್ಡಿ ಸೂಚನೆ ಮೇರೆಗೆ ರಸ್ತೆಗಳ ಬಿಎಂಟಿಸಿ ಟೀಂ ಸರ್ವೇ ನಡೆಸಿದೆ.
ಹಾಗಿದ್ರೆ ಡಬಲ್ ಡೇಕರ್ ಬಸ್ ಗಳ ಸಂಚಾರ ಯಾವ ಯಾವ ಮಾರ್ಗದಲ್ಲಿ ಇರಬಹುದು
*ಔಟರ್ ರಿಂಗ್ ರೋಡ್
*ಶಿವಾಜಿನಗರ ಟು ಮೆಜೆಸ್ಟಿಕ್
*ಎಲೆಕ್ಟ್ರಾನಿಕ್ ಸಿಟಿ
*ಏರ್ಪೋರ್ಟ್ ರಸ್ತೆ ಟು ಹೆಬ್ಬಾಳ ಮಾರ್ಗ
# ಮೈಸೂರು ರಸ್ತೆ
#ಇಂದಿರಾನಗರ ಸುತ್ತಮುತ್ತ
#ವಿಧಾನಸೌಧ, ಕಬ್ಬನ್ ಪಾರ್ಕ್ ಟು ಮೆಜೆಸ್ಟಿಕ್