Publish Date: Mon, 08 Aug 2022 (19:50 IST)
Updated Date: Mon, 08 Aug 2022 (19:56 IST)
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮತ್ತಿಬ್ಬರನ್ನ ಬಂಧನ ಮಾಡಲಾಗಿದೆ. ಪೊಲೀಸರು ಬಂಧಿತರನ್ನ ವಿಚಾರಣೆ ನಡೆಸುತ್ತಿದ್ದಾರೆ. ಅಬೀದ್, ನೌಫಾಲ್ ಬಂಧಿತ ಆರೋಪಿಗಳಾಗಿದ್ದಾರೆ. ಅಬಿದ್ ನಾವೂರು ನಿವಾಸಿಯಾಗಿದ್ದು ಯಾಕೂಬ್ರ ಮಗ. ಇನ್ನು, ನೌಫಾಲ್ ಬೆಳ್ಳಾರೆಯ ಗೌರಿಹೊಳೆ ನಿವಾಸಿ ಮೊಹಮ್ಮದ್ ಮಗನಾಗಿದ್ದಾನೆ. ಹಂತಕರು ಕೊಲೆ ಮಾಡಲು ಅಬೀದ್ ಬಳಿ ಇದ್ದ ಕೇರಳ ರಿಜಿಸ್ಟ್ರೇಷನ್ ಬೈಕ್ನ್ನು ಬಳಸಿದ್ದಾರೆ. ಅದೇ ಬೈಕ್ನಲ್ಲಿ ಬಂದು ಕೊಲೆ ಮಾಡಿ ಮೂವರು ಹಂತಕರು ಹೋಗಿದ್ದಾರೆ.
ಅಬೀದ್ಗೆ ಹಂತಕರ ಜೊತೆ ನೇರಾನೇರ ಸಂಪರ್ಕ ಇತ್ತು ಎನ್ನಲಾಗುತ್ತಿದೆ. ನೌಫಾಲ್ಗೂ ಕೂಡ ಹಂತಕರ ಜೊತೆ ನೇರಾನೇರ ಸಂಪರ್ಕವಿತ್ತು. ಹಂತಕರಿಗೆ ಪ್ರವೀಣ್ ಅಂಗಡಿ ಬಗ್ಗೆ ನೌಫಾಲ್ ಮಾಹಿತಿ ನೀಡಿದ್ದ. ಅಂಗಡಿ ಬಳಿ ಬಂದು ಪ್ರವೀಣ್ ಇದ್ದಾನಾ ಇಲ್ವಾ ಅಂತಾ ನೌಫಾಲ್ ಮಾಹಿತಿ ಕೊಡೋ ಕೆಲಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.