Publish Date: Mon, 20 Jul 2026 (14:52 IST)
Updated Date: Mon, 20 Jul 2026 (14:55 IST)
ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಯಾಕೆ ತಮ್ಮ ಅಜ್ಜಿ ಚನ್ನಮ್ಮ ದೇವೇಗೌಡರ ಅಂತ್ಯಕ್ರಿಯೆಗೆ ಬರಲಿಲ್ಲ ಕಾರಣ ಬಯಲಾಗಿದೆ.
ಮನೆಗೆಲಸದಾಕೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇತ್ತ ಪ್ರಜ್ವಲ್ ಅಜ್ಜಿ ಚನ್ನಮ್ಮ ತೀರಿಕೊಂಡಿದ್ದಾರೆ. ಅಜ್ಜಿಯ ಸಾವಿನ ಸುದ್ದಿ ತಿಳಿದು ಪ್ರಜ್ವಲ್ ಜೈಲಿನಲ್ಲೇ ಕಣ್ಣೀರು ಹಾಕಿದ್ದರು ಎಂದು ತಿಳಿದುಬಂದಿದೆ.
ಚನ್ನಮ್ಮ ಅಂತ್ಯಕ್ರಿಯೆ ಇಂದು ನೆರವೇರುತ್ತಿದೆ. ಅಜ್ಜಿಯ ಅಂತ್ಯಸಂಸ್ಕಾರಕ್ಕೆ ಪ್ರಜ್ವಲ್ ಪರೋಲ್ ಪಡೆದು ಬರಬಹುದು ಎಂದು ನಿರೀಕ್ಷೆಯಿತ್ತು. ಆದರೆ ಅವರು ಬರುತ್ತಿಲ್ಲ ಎಂದು ಖಚಿತವಾಗಿದೆ. ಇದಕ್ಕೆ ಕಾರಣ ತಂದೆ ಎಚ್ ಡಿ ರೇವಣ್ಣ ಸಲಹೆ ಎನ್ನಲಾಗಿದೆ.
ಪ್ರಜ್ವಲ್ ಬಂದರೆ ಮಾಧ್ಯಮಗಳ ಗಮನ ಅವರ ಮೇಲಿರಲಿದೆ. ಈ ಸಂದರ್ಭದಲ್ಲಿ ಅವರು ಅಲ್ಲಿದ್ದರೆ ಸಾರ್ವಜನಿಕವಾಗಿ ಮುಜುಗರವಾಗಬಹುದು. ಈ ಕಾರಣಕ್ಕೆ ಮಗ ಬರುವುದು ಬೇಡ ಎಂದು ರೇವಣ್ಣನೇ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಅವರು ಬರುತ್ತಿಲ್ಲ. ಆದರೆ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಅಂತ್ಯ ಸಂಸ್ಕಾರ ವೀಕ್ಷಿಸಲಿದ್ದಾರೆ ಎನ್ನಲಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ