Select Your Language

Notifications

webdunia
webdunia
webdunia
webdunia

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿಕೆ ಕೇಸ್‌, ಮಹತ್ವದ ಬೆಳವಣಿಗೆ

Prajwal Revanna Pendrive Case
ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್‌ ಪ್ರಕರಣದಲ್ಲಿ ಪೆನ್‌ಡ್ರೈವ್ ಹಂಚಿಕೆ ಸಂಬಂಧ ಇದೀಗ ಮಹತ್ವದ ಬೆಳವಣಿಗೆಯಾಗಿದೆ. ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಎಸ್‌ಐಟಿ ಚಾರ್ಜ್‌ಶೀಟ್‌ ಅನ್ನು ಸಲ್ಲಿಕೆ ಮಾಡಿದ್ದು, ಹಾಸನ ಸಿವಿಲ್ ಕೋರ್ಟ್‌ಗೆ 13,712 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. 

ಇದರದಲ್ಲಿ ಒಟ್ಟು 39ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.ಅಶ್ಲೀಲ ವಿಡಿಯೋ ಹಂಚಲು ಆರೋಪಿಗಳು 70 ಪೆನ್‌ಡ್ರೈವ್ ಖರೀದಿಸಿದ್ದರು. ಹಾಸನದಲ್ಲೇ 70 ಪೆನ್‌ಡ್ರೈವ್ ಖರೀದಿ ಮಾಡಿರುವುದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. 

ಪ್ರಕರಣದಲ್ಲಿ 52 ಮಂದಿ ಹೆಸರು ಉಲ್ಲೇಖ ಮಾಡಲಾಗಿತ್ತು. 52 ಮಂದಿಯಲ್ಲಿ 39 ಮಂದಿ ಆರೋಪ ಸಾಬೀತಾಗಿದೆ. ವಕೀಲ ಪೂರ್ಣಚಂದ್ರ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಹರಿದಾಡಿತ್ತು. 

70 ಪೆನ್‌ಡ್ರೈವ್ ಖರೀದಿಸಿ ವಿಡಿಯೋ ವೈರಲ್ ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಈ ಸಂಬಂಧ 277 ಸಾಕ್ಷಿಗಳ ಹೇಳಿಕೆಯನ್ನು ಎಸ್‌ಐಟಿ ದಾಖಲಿಸಿದೆ. ತಾಂತ್ರಿಕ ವರದಿ, ಎಫ್‌ಎಸ್‌ಎಲ್ ಸಾಕ್ಷಿಗಳ ವರದಿ ಆಧರಿಸಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ಪ್ರಕರಣದಲ್ಲಿ ಎರಡು ಪಕ್ಷದ ಕಾರ್ಯಕರ್ತರ ವಿರುದ್ಧ ಆರೋಪ ಕೇಳಿಬಂದಿದೆ. ವಿಡಿಯೋ ವೈರಲ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಹೆಸರು ಕೈಬಿಡಲಾಗಿದೆ. ತನಿಖೆ ಪೂರ್ಣಗೊಳಿಸಿ ಹಾಸನ ಕೋರ್ಟ್‌ಗೆ ಎಸ್‌ಐಟಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನಗೆ ನಯನತಾರಾ ಬೇಕು, ಕನಸು ಈಡೇರಿಸುವಿರಾ: ವಿವಾದ ಸೃಷ್ಟಿಸಿದ ಎಐಎಂಡಿಎಂಕೆ ಸಂಸದ ಷಣ್ಮುಗಂ ಹೇಳಿಕೆ