Publish Date: Tue, 04 Aug 2020 (21:54 IST)
Updated Date: Tue, 04 Aug 2020 (21:56 IST)
ಜಿಲ್ಲಾಧಿಕಾರಿಯೊಬ್ಬರಿಂದ ತರಬೇತಿ ಪಡೆದಿದ್ದ ವೈದ್ಯರಿಬ್ಬರು ಯುಪಿಎಸ್ ಸಿ ಉನ್ನತ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ರಿಂದ ವೈದ್ಯರಾದ ಅಭಿಷೇಕ್ ಗೌಡ 278ನೇ ರ್ಯಾಂಕ್ ಪಡೆದು IAS ಗೆ ನೇಮಕ ಆಗಿದ್ದರೆ, ವೈದ್ಯ ವಿವೇಕ್ ರೆಡ್ಡಿ 485 ನೇ ರ್ಯಾಂಕ್ IPS ಗೆ ನೇಮಕವಾಗಿದ್ದಾರೆ. ಇಬ್ಬರೂ ವೈದ್ಯರಿಗೂ ಸಂದರ್ಶನಕ್ಕೆ ತರಬೇತಿ ನೀಡಿದ್ದರು ಮಂಡ್ಯ ಜಿಲ್ಲಾಧಿಕಾರಿ.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಇನ್ನು ಹೆಚ್ಚು ಮಂಡ್ಯದ ಯುವಕರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಬೇಕಾಗಿ ತಿಳಿಸಿದ್ದಾರೆ.