Publish Date: Wed, 08 Jul 2020 (20:36 IST)
Updated Date: Wed, 08 Jul 2020 (20:37 IST)
ಹೆಡ್ ಕಾನ್ಸಟೇಬಲ್ ವೊಬ್ಬರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದ್ದರಿಂದಾಗಿ ಪೊಲೀಸ್ ಠಾಣೆಯನ್ನೇ ಬೇರೆ ಕಡೆ ಶಿಫ್ಟ್ ಮಾಡಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 27 ಜನರಿಗೆ ಕೊರೊನಾ ಸೋಂಕು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 319 ತಲುಪಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕೊಂದರಲ್ಲೇ 16 ಜನರಲ್ಲಿ ಸೋಂಕು ಕಾಣಿಸಿದೆ. ಕೊರಟಗೆರೆ 1, ಮಧುಗಿರಿ 5, ತಿಪಟೂರು 3, ತುಮಕೂರಿನಲ್ಲಿ 2 ಪ್ರಕರಣ ಪತ್ತೆಯಾಗಿದೆ. ಇಬ್ಬರು ಗುಣಮುಖರಾಗಿದ್ದಾರೆ. ಉಳಿದಂತೆ 240 ಸಕ್ರಿಯ ಪ್ರಕರಣಗಳಿವೆ.
ತಿಪಟೂರು ಪೊಲೀಸ್ ಠಾಣೆಯಲ್ಲಿ ಓರ್ವ ಹೆಡ್ ಕಾನ್ಸಟೇಬಲ್ ಗೆ ಕೊರೊನಾ ಸೋಂಕು ತಗುಲಿದ್ದು, ನಗರ ಪೊಲೀಸ್ ಠಾಣೆಯನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಲಾಗಿದೆ. ಪೊಲೀಸರು ಸೋಂಕಿಗೆ ಒಳಗಾಗುತ್ತಿರುವುದು ತೀವ್ರ ಆತಂಕಕ್ಕೀಡು ಮಾಡಿದೆ.