Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಗ್ರೀನ್ ಝೋನ್ ನಲ್ಲಿ ಕೊನೆ ಘಳಿಗೆವರೆಗೂ ಸ್ಥಾನ ಉಳಿಸಿಕೊಂಡಿದ್ದ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿಯುತ್ತಿದೆ.
ಕೊರೋನಾ ಮಹಾಮಾರಿ ಕೊಪ್ಪಳದಲ್ಲಿ ದಾಖಲೆ ಬರೆದಿದೆ. ಒಂದೇ ದಿನ ಇಪ್ಪತ್ತಕ್ಕೂ ಅಧಿಕ ಕೊರೋನಾ ಕೇಸ್‌ಗಳು ಪತ್ತೆಯಾಗಿವೆ. ಕೊಪ್ಪಳದ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿ ಜೂನ್ 30 ರಿಂದ ನಗರ ಠಾಣೆಗೆ ಹಾಜರಾಗಿದ್ದ ಪೊಲೀಸ್ ಕಾನ್ಸಟೇಬಲ್ ಗೆ ಕೊರೋನಾ ದೃಢಪಟ್ಟಿದೆ.
ಕೊಪ್ಪಳ ಜಿಲ್ಲೆಯಲ್ಲಿ ಮೊದಲ ಬಾರಿಗೆ ಪೊಲೀಸ್ ಕಾನ್ಸಟೇಬಲ್ ಗೆ ಕೊರೊನಾ ಕಾಣಿಸಿಕೊಂಡಿದೆ.
ಕೊಪ್ಪಳ ನಗರ ಪೊಲೀಸ್ ಠಾಣೆ ಹಾಗೂ ಪೇದೆ ವಾಸಿಸುತ್ತಿದ್ದ ಬಿ.ಟಿ.ಪಾಟೀಲ್ ನಗರದ ಬಡಾವಣೆಯೊಂದನ್ನ ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ.