ಗೌರಿ ಲಂಕೇಶ್ ಹತ್ಯೆ ಕುರಿತಂತೆ ತನಿಖೆ ನಡೆಯುತ್ತಿದ್ದು, ಹಂತಕರ ಬಗ್ಗೆ ಮಹತ್ವದ ಸುಳಿವು ಲಭ್ಯವಾಗುತ್ತಿದೆ. ಗೌರಿ ಹತ್ಯೆಯಾದ ರಾಜ ರಾಜೇಶ್ವರಿ ನಿವಾಸದ ಎದುರು ಮನೆಯ ಮಹಿಳೆಯೊಬ್ಬರು ಹಂತಕರನ್ನ ನೋಡಿದ್ದಾರೆ ಎನ್ನಲಾಗುತ್ತಿದ್ದು, ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಯಮವೊಂದು ವರದಿ ಮಾಡಿದೆ.
ಗೌರಿ ಲಂಕೇಶ್ ಅವರನ್ನ ಹಂತಕ ಶೂಟ್ ಮಾಡಿದ ದೃಶ್ಯವನ್ನ ಮಹಿಳೆ ಕಣ್ಣಾರೆ ಕಂಡಿದ್ದಾರೆ ಎನ್ನಲಾಗುತ್ತಿದ್ದು, ಹಂತಕರ ಚಹರೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಆ ಮಾಹಿತಿಗಳನ್ನ ಆಧರಿಸಿ ಹಂತಕರ ರೇಖಾಚಿತ್ರ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಮಧ್ಯೆ, ರಾಜರಾಜೇಶ್ವರಿನಗರದ ಗೌರಿ ಲಂಕೇಶ್ ನಿವಾಸದಿಂದ ಗಾಂಧಿ ಬಜಾರ್`ನಲ್ಲಿರುವ ಅವರ ಕಚೇರಿವರೆಗಿನ ಸಿಸಿಟಿವಿ ವಿಡಿಯೋಗಳನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೌರಿ ಲಂಕೇಶ್ ಅವರನ್ನ ಯಾರಾದರೂ ಫಾಲೋ ಮಾಡುತ್ತಿದ್ದರಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಇತ್ತ, ಘಟನೆಯನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಿಎಂ ಸಿದ್ದರಾಮಯ್ಯ ತಮ್ಮೆಲ್ಲ ಕಾರ್ಯಕ್ರಮಗಳನ್ನ ರದ್ದು ಮಾಡಿ ತನಿಖೆಯ ಮಾಹಿತಿ ಪಡೆಯುತ್ತಿದ್ದಾರೆ. ಗೃಹ ಸಚಿವ ರಾಮಲಿಂಗಾರೆಡ್ಡಿ ಸಹ ಗುಪ್ತಚರ, ಪೊಲೀಸರಿಂದ ಮಾಹಿತಿ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ