ಮೆಲ್ಬೋರ್ನ್: ವಿದೇಶದಲ್ಲಿ ಪದೇ ಪದೇ ಹಿಂದೂ ದೇವರಿಗೆ ಅವಮಾನವಾಗುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಂತಹದ್ದೇ ಒಂದು ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಹಿಂದೂಗಳ ಆದಿ ಪೂಜಿತ ಗಣೇಶನ ವಿಗ್ರಹವನ್ನು ಮೇಕೆ ಮಾಂಸದ ಜಾಹೀರಾತಿಗೆ ಬಳಸಿಕೊಂಡಿರುವುದು ಆಸ್ಟ್ರೇಲಿಯಾದಲ್ಲಿ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.
ತಕ್ಷಣವೇ ಈ ಸಂಸ್ಥೆಯನ್ನು ನಿಷೇಧಿಸಬೇಕೆಂದು ಭಾರತೀಯರು ಆಗ್ರಹಿಸಿದ್ದಾರೆ. ಆಸ್ಟ್ರೇಲಿಯಾದ ಮೀಟ್ ಆಂಡ್ ಲೈವ್ ಸ್ಟಾಕ್ (ಎಂಎಲ್ಎ) ಈ ಎಡವಟ್ಟು ಮಾಡಿದೆ. ಗಣೇಶನ ವಿಗ್ರಹದ ಜತೆ, ಜೀಸಸ್, ಬುದ್ಧನ ವಿಗ್ರಹಗಳು ಡೈನಿಂಗ್ ಟೇಬಲ್ ನಲ್ಲಿ ಮೇಕೆ ಮಾಂಸವನ್ನು ಸವಿಯುತ್ತಿರುವಂತೆ ಚಿತ್ರಿಸಲಾಗಿದೆ. ಇದು ಅಲ್ಲಿರುವ ಭಾರತೀಯ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿದೆ.