Webdunia - Bharat's app for daily news and videos

Install App

ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿ ಸುಲಿಗೆ ಮಾಡಿದ ಪೊಲೀಸರು....!

Webdunia
ಗುರುವಾರ, 16 ಮಾರ್ಚ್ 2023 (16:30 IST)
ಕಾನೂನು ಬಾಹಿರ ಕೃತ್ಯ ನಡೆಸಿದ ಬಳಿಕ ಸಿಕ್ಕಿ ಬಿದ್ದೇಬೀಳ್ತಿವೆ ಎಂದು  ಆರೋಪಿಗಳಿಗಿಂತ ಪೊಲೀಸರಿಗೇ ಗೊತ್ತಿರುತ್ತೆ. ಆರೋಪಿಗಳನ್ನ ಟ್ರೇಸ್ ಮಾಡುವ ವಿದ್ಯೆಯನ್ನು ಖಾಕಿ   ಕರಗತ ಮಾಡಿಕೊಂಡಿರುತ್ತೆ.  ಅದು ಗೊತ್ತಿದ್ದೂ ಗೊತ್ತಿದ್ದು ಪೊಲೀಸರೇ ಕೃತ್ಯವನ್ನ ಎಸಗಿದ್ರೆ ಹೇಗಿರುತ್ತೆ ನೀವೇ ಹೇಳಿ. ಹೀಗೆ  ಕೋಟ್ಯಾಂತರ ಮೌಲ್ಯದ ಚಿನ್ನದ ಗಟ್ಟಿಯನ್ನ ಸುಲಿಗೆ ಮಾಡಿದ್ದ ಪೊಲೀಸರು ಈಗ ಅಂದರ್ ಆಗಿದ್ದಾರೆ. ರೈಲ್ವೆ ಪೊಲೀಸರಾದ ಮೌನೇಶ್, ಸಿದ್ದಪ್ಪ ಹಾಗೂ ಇವರಿಗೆ ಸಹಾಯ ಮಾಡಿದ್ದ ಮೌನೇಶ್ ಬಂಧಿತ ಆರೋಪಿಗಳು.ಮೊನ್ನೆ ಒಂದು ಕೋಟಿ 12 ಲಕ್ಷ ಮೌಲ್ಯದ   ಎರಡೂವರೆ ಕೆಜಿ ಚಿನ್ನದ ಗಟ್ಟಿಯನ್ನ ಕಳ್ಳತನ ಮಾಡಿದ್ದರು. ಅಬ್ದುಲ್ ರಜಾಕ್ ,ಮಲ್ಲೇಶ್ ಸುನೀಲ್ ಮೂವರು ತಮ್ಮ ಮಾಲೀಕನ ಅಣತಿಯ ಮೇರೆಗೆ ರಾಯಚೂರಿನಿಂದ ಚಿನ್ನದ ಗಟ್ಟಿ ಖರೀದಿಗೆ ಬಂದಿದ್ರು .ಚಿನ್ನ ಖರೀದಿಯ ಬಳಿಕ ಮರಳಿ ಊರಿಗೆ ಹೋಗಲು ರಾತ್ರಿ 11ಕ್ಕೆ ಬಸ್ ಇರುವುದರಿಂದ ಲಾಡ್ಜ್ ರೂಮಿಗೆ ಹೋಗಿ ಬಳಿಕ 10-45ರ ಸಮಯಕ್ಕೆ ಆನಂದ್ ರಾವ್ ಸರ್ಕಲ್ ಬಳಿ ಬಂದಿದ್ದಾರೆ. ಈ ವೇಳೆ ಏಕಾಏಕಿ ಬಂದಿದ್ದ ಇಬ್ಬರು ನಾವು ಲಿಂಗಸಗೂರು ಪೊಲೀಸರೆಂದು ಹೇಳಿ ಎರಡು ತಿಂಗಳಿನಿಂದ  ಗೋಲ್ಡ್ ಸ್ಮಗಲಿಂಗ್ ಮಾಡುತ್ತಿದ್ದೀರಾ ಎಂದು ಬೆದರಿಸಿ ಪೊಲೀಸರು ಪಟ್ಟುಗಳಂತೆ  ಹಿಂಬದಿ ಪ್ಯಾಂಟ್ ಹಿಡಿದು ಕರೆದೊಯ್ದಿದ್ದರು. ನಂತರ ರೇಸ್ ಕೋರ್ಸ್ , ಚೌಡಯ್ಯ ರಸ್ತೆ ಸೇರಿದಂತೆ ಹಲವೆಡೆ ಇವರನ್ನು ತಳ್ಳಿ ಆಟೋದಲ್ಲಿ ಪರಾರಿಯಾಗಿದ್ದರು. ಮೊದಲಿಗೆ ಇದು ದೂರುದಾರನ ಕಡೆಯವರು ಅಥವಾ ಚಿನ್ನ ನೀಡಿದ್ದ ಬೆಂಗಳೂರಿನ ಶಾಪ್ ಸಿಬ್ಬಂದಿ ಕೃತ್ಯ ಎಂಬುದು ಮೇಲ್ನೋಟಕ್ಕೆ ಅನಿಸಿತ್ತು. ಆದರೆ ಅಸಲಿ ಸಂಗತಿ ತಿಳಿದಿದ್ದೇ ಪೊಲೀಸ್ ಡಾಟಾ ಬೇಸ್ ನಲ್ಲಿರುವ ಮಾಹಿತಿಯಿಂದ. ಪೊಲೀಸರೆಂದು ಹೇಳಿದ್ದರಿಂದ ಪೊಲೀಸ್ ಇಲಾಖಾ ಸಿಬ್ಬಂದಿ ಡಾಟಾ ಬೇಸ್ ನ್ನು ಪರಿಶೀಲನೆ ನಡೆಸಲಾಗಿತ್ತು . ಸಿಸಿಟಿವಿಯಲ್ಲಿ ಕಾಣಿಸಿದ್ದ ಫೇಸ್ ನ್ನು ಸ್ಕ್ಯಾನ್ ಮಾಡಿ ಸೂಪರ್ ಇಂಪೋಝ್ ಮಾಡಿದಾಗ ಆರೋಪಿಗಳ ಚಹರೆ ಸ್ಪಷ್ಟವಾಗಿತ್ತು.  ಆ ಫೊಟೋವನ್ನ ರಾಜ್ಯದ ಎಲ್ಲಾ ವಿಭಾಗದ ಪೊಲೀಸರ ಡಾಟಾಬೇಸ್ ನಲ್ಲಿ ಪರಿಶೀಲನೆ ನಡೆಸಿದಾಗ ಅಸಲಿ ಸಂಗತಿ ಹೊರಬಿದ್ದಿದೆ‌.2018 ರ ಬ್ಯಾಚ್ ನ  ರೈಲ್ವೆ ಪೊಲೀಸ್ ಆಗಿರುವ ಜ್ಞಾನೇಶ್ ಹಾಗೂ ಸಿದ್ದಪ್ಪ ಚಿನ್ನ ಕದ್ದು ತಮ್ಮ ರೂಂನಲ್ಲಿ ಅಡಿಗಿಸಿಟ್ಟಿರುವುದು ಬೆಳಕಿಗೆ ಬಂದಿದೆ.ಇನ್ನು ಸದ್ಯಕ್ಕೆ ಆರೋಪಿಗಳನ್ನ ಬಂಧಿಸಲಾಗಿದೆ. ಖುದ್ದು ಡಿಸಿಪಿ ಲಕ್ಷ್ಮಣ ನಿಂಬರಗಿಯವರೇ ವಿಚಾರಣೆ ನಡೆಸುತ್ತಿರುವ ಹಿನ್ನಲೆ  ಮತ್ತಷ್ಟು ಮಾಹಿತಿ ಹೊರ ಬೀಳಲಿದೆ. ಇದರಲ್ಲಿ ಪೊಲೀಸ್ ಸಿಬ್ಬಂದಿಯ ಜೊತೆ ಇವರಿಗೆ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವ ಮೌನೇಶ್ ಎಂಬಾತ ಸಾತ್ ನೀಡಿದ್ದ.‌ಹೀಗಾಗಿ ಮೂವರನ್ನು ಬಂಧಿಸಿ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ಪಾಕಿಸ್ತಾನದ ಮುಂದೆ ನಮ್ಮ ಎಷ್ಟು ವಿಮಾನ ಕಳೆದುಕೊಂಡಿತು ಲೆಕ್ಕ ಕೊಡಿ

ಟರ್ಕಿ ಸೇಬು ಬಹಿಷ್ಕಾರಕ್ಕೆ ಹೆಚ್ಚಿದ ಒತ್ತಾಯ: 24ರಂದು ಪ್ರಧಾನಿಯೊಂದಿಗೆ ಚರ್ಚೆ

India Pakistan: ತಿನ್ನೋದು ಭಾರತದ ಅನ್ನ, ಸೇವೆ ಮಾತ್ರ ಪಾಕಿಸ್ತಾನಕ್ಕೆ: ಯುಪಿ ವ್ಯಕ್ತಿ ಅರೆಸ್ಟ್

ನಿಮ್ಮ ಪ್ರಾಮಾಣಿಕತೆಯನ್ನು ಮೆಚ್ಚಿದೆ: ಡಿಕೆ ಶಿವಕುಮಾರ್‌ಗೆ ಟಾಂಗ್ ಕೊಟ್ಟ ಸಂಸದ ತೇಜಸ್ವಿ ಸೂರ್ಯ

I Stand With You: ಬೆಂಗಳೂರಿನ ಜನತೆಗೆ ಧೈರ್ಯ ತುಂಬಿದ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments