ನಗರದ ಬೌರಿಂಗ್ ಆಸ್ಪತ್ರೆಯ ಎಕ್ಸ್ ರೇ ವಿಭಾಗದಲ್ಲಿ ಕಳೆದೊಂದು ವಾರದಿಂದ ಸಮಸ್ಯೆ ಉಂಟಾಗಿದೆ. ರೋಗಿಗಳಿಗೆ ಎಕ್ಸ್ ರೇ ರಿಪೋರ್ಟ್ ನೀಡುವ ಎಕ್ಸ್ ರೇ ಫಿಲ್ಮ್ ಖಾಲಿಯಾಗಿದ್ದು, ರಿಪೋರ್ಟ್ ಶೀಟ್ ಪಡೆಯಲು ರೋಗಿಗಳು ನಿತ್ಯ ಪರದಾಡ್ತಿದ್ದಾರೆ. ಆಸ್ಪತ್ರೆಯಲ್ಲಿ x Ray films ಖಾಲಿಯಾಗಿದೆ. x Ray films ಅಂದ್ರೆ ಎಕ್ಸ್ ರೇ ಆದ ಬಳಿಕ ಕಪ್ಪು ಶೀಟ್ ನಲ್ಲಿ ಬರುವ ವರದಿಯ ಪ್ರತಿ. ಈ x Ray films ಖಾಲಿಯಾಗಿದ್ದರಿಂದ, ರೋಗಿಗಳು ತಮ್ಮ ಮೊಬೈಲ್ ನಲ್ಲೇ ಫೋಟೋ ಕ್ಲಿಕ್ಕಿಸಿ ಕೊಳ್ಳುತಿದ್ದಾರೆ.ಇನ್ನು ಈ ಫೋಟೋವನ್ನ ರೋಗಿಗಳು ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೇರೆ ಆಸ್ಪತ್ರೆಗೆ ಹೋದಾಗ ಇಲ್ಲಿ ನೀಡಿದ ಎಕ್ಸ್ ರೇ ರಿಪೋರ್ಟ್ ಬೇಕೆ ಬೇಕು. ಆದ್ರೆ ಇಲ್ಲಿ ಎಕ್ಸ್ ರೇ ರಿಪೋರ್ಟ್ ಶೀಟೇ ಇಲ್ಲ. ಹೀಗಾಗಿ ಆಸ್ಪತ್ರೆಗೆ ನಾನಾ ಭಾಗಗಳಿಂದ ಬರುವ ರೋಗಿಗಳಿಗೆ ತುಂಬಾ ಸಮಸ್ಯೆಯಾಗಿದ್ದು ರೋಗಿಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ