ಕೆ ಎಸ್ ಆರ್ ಟಿ ಸಿ ನಿಗಮದಿಂದ ಸಸಿ ನೆಡುವ ಕಾರ್ಯಕ್ರಮ
Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
bangalore , ಭಾನುವಾರ, 5 ಜೂನ್ 2022 (18:55 IST)
ಕೆ.ಎಸ್.ಆರ್.ಟಿ.ಸಿ ನಿಗಮದ ಕೇಂದ್ರ ಕಚೇರಿಯ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿಶ್ವ ದಿನದ ಅಂಗವಾಗಿ ಕೆ.ಆರ್.ಟಿ., ನಿಗಮದ ವ್ಯಾಪ್ತಿಯಲ್ಲಿರುವ ಎಲ್ಲಾ ವಿಭಾಗಗಳ ಪರಿಸರ ಸಂಸ್ಥೆಗಳ ಬಸ್ ನಿಲ್ದಾಣಗಳು, ಘಟಕ, ಪ್ರಾದೇಶಿಕ ಕಾರ್ಯಾಗಾರಗಳು, ತರಬೇತಿ ಕೇಂದ್ರಗಳಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಅಧಿಕಾರಿ, ಮೇಲ್ವಿಚಾರಕ, ತಾಂತ್ರಿಕ, ಚಾಲನಾ ಸಿಬ್ಬಂದಿಗಳು ಇತರ ಇಲಾಖೆ, ಸಂಸ್ಥೆಗಳ ಸಹಯೋಗದೊಂದಿಗೆ ಸಸಿ ನೆಡುವ ಕಾರ್ಯವನ್ನು ನಡೆಸಲಾಯಿತು. ಪ್ರಸಕ್ತ 2020-21ನೇ ಸಾಲಿನಲ್ಲಿ ಮುಂದಿನ ನಾಲ್ಕು ತಿಂಗಳುಗಳಲ್ಲಿ ಸಂಕಲ್ಪತರು ಫೌಂಡೇಶನ್ ವತಿಯವರ ಸಹಕಾರದೊಂದಿಗೆ ಒಟ್ಟು 4500 ಗಿಡಗಳನ್ನು ನೆಡಲು ವಿಭಾಗವಾರು ಯೋಜನೆಯನ್ನು ರೂಪಿಸಲಾಗಿದೆ.
ಮುಂದಿನ ಸುದ್ದಿ