Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶ್ರೀಗಂಧದ ಮರಗಳ ಕಳ್ಳತನದ ಆರೋಪ

ಶ್ರೀಗಂಧದ ಮರಗಳ ಕಳ್ಳತನದ ಆರೋಪ
bangalore , ಶನಿವಾರ, 4 ಜೂನ್ 2022 (21:11 IST)
ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಮೌದ್ಗಿಲ್ ಮತ್ತು ಅಧ್ಯಕ್ಷ  ಬೇಳೂರು ರಾಘವೇಂದ್ರ ಶೆಟ್ಟಿ ನಡುವಿನ ಆರೋಪ - ಪ್ರತ್ಯಾರೋಪ ಮುಂದುವರೆದಿದೆ. ತಮ್ಮ ವಿರುದ್ಧದ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರ ಒದಗಿಸಬೇಕು, ಇಲ್ಲವಾದಲ್ಲಿ 1 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಡಿ.ರೂಪಾ ಮೌದ್ಗಿಲ್ಗೆ ರಾಘವೇಂದ್ರ ಶೆಟ್ಟಿ ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ. ರಾಘವೇಂದ್ರ ಶೆಟ್ಟಿ ನಿಗಮದ ಅಧ್ಯಕ್ಷರಾಗಿ 3 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಶ್ರೀಗಂಧದ ವಸ್ತುಗಳನ್ನ ಕೊಂಡೊಯ್ದಿದ್ದಾರೆ ಹಾಗೂ 24 ಕೋಟಿ ರೂ. ವಂಚಿಸಿರುವ ಆರೋಪ ಎದುರಿಸುತ್ತಿರುವ ನಿಗಮದ ಫೈನಾನ್ಸ್ ವಿಭಾಗದ ಕಿಶೋರ್ ಕುಮಾರ್ ಅವರನ್ನ ಮತ್ತೆ ನಿಗಮಕ್ಕೆ ಕರೆತರಲು 4-5 ಕೋಟಿಗಳ ಮಾತುಕತೆ ನಡೆಸಿದ್ದಾರೆ ಎಂದು ರೂಪಾ ಆರೋಪಿಸಿದ್ದಾರೆ. ಆದರೆ ಇದೆಲ್ಲ ಸುಳ್ಳು ಆರೋಪ. ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ದಾಖಲೆ ಕೊಡಬೇಕು ಎಂದು ಪತ್ರ ಬರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಗನಕ್ಕೇರಿದ ತರಕಾರಿ ಬೆಲೆ