Publish Date: Thu, 09 Mar 2023 (13:44 IST)
Updated Date: Thu, 09 Mar 2023 (13:46 IST)
ಆಗಸದಲ್ಲಿ ಹಾರಾಡುವ ವಿಮಾನಗಳಿಗೂ ಪೋಟೋ ಶೂಟ್ ನಡೆಯುತ್ತಾ? ಈ ದೃಶ್ಯಗಳನ್ನು ನೋಡಿದ್ರೆ ಹೌದು ಅನ್ಸುತ್ತೆ. ಆಕಾಶದಲ್ಲಿ ಹಾರುತ್ತಿದ್ದ ಯುದ್ಧ ವಿಮಾನಗಳನ್ನು ಸೆರೆ ಹಿಡಿಯಲು ಪೋಟೋಗ್ರಾಫರ್ ಎಲ್ಲಿ ಕುಳಿತಿದ್ದಾರೆ ನೋಡಿ.. ಸ್ವಲ್ಪ ಎಚ್ಚರ ತಪ್ಪಿದ್ರೂ ಪೋಟೋಗ್ರಾಫರ್ ಭೂಮಿಗೆ ಬೀಳೋದು ಗ್ಯಾರಂಟಿ. ಆದರೆ ಫೋಟೋಗ್ರಾಫರ್ ಯುದ್ಧ ವಿಮಾನಗಳು ಎಷ್ಟು ಅಚ್ಚುಕಟ್ಟಾಗಿ ಪೋಸ್ ನೀಡ್ತಿವೆ ಅಂದ್ರೆ ಮದುವೆ ಮನೆಯಲ್ಲಿ ವಧು-ವರ ಪೋಸ್ ನೀಡಿದಂತೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಒಟ್ಟಾರೆ ಆಗಸದಲ್ಲಿ ಮಿಂಚಿ ಮರೆಯಾಗುವ ಯುದ್ಧ ವಿಮಾನಗಳನ್ನು ಹೀಗೂ ಸೆರೆ ಹಿಡಿತಾರಾ ಎಂದು ವೀಕ್ಷಕರು ಹುಬ್ಬೆರಿಸಿದ್ದಾರೆ.