ಏಷ್ಯಾ ಫೆಸಿಫಿಕ್ ವಲಯಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯಂತ ಸ್ವಚ್ಛ ಏರ್ಪೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಾರ್ಷಿಕ 40 ಮಿಲಿಯನ್ ಪ್ರಯಾಣಿಕರು ಈ ಏರ್ಪೋರ್ಟ್ ಮೂಲಕ ಸಂಚರಿಸಲಿದ್ದು, ಸ್ವಚ್ಛತೆ ವಿಚಾರದಲ್ಲಿ ವಿಮಾನ ನಿಲ್ದಾಣ ನಿರ್ವಹಿಸುವ ದೆಹಲಿ ಇಂಟರ್ ನ್ಯಾಷನಲ್ ಏರ್ಪೋರ್ಟ್ ಲಿಮಿಟಿಡ್ - DIAL ಮುಂಚೂಣಿಯಲ್ಲಿದೆ. ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ ನ್ಯಾಷನಲ್ ( ACI ) ದೆಹಲಿ ವಿಮಾನ ನಿಲ್ದಾಣವನ್ನ ಸ್ವಚ್ಛ ನಿಲ್ದಾಣ ಎಂದು ಗುರ್ತಿಸಿದೆ. ಏರ್ಪೋರ್ಟ್ ಸರ್ವಿಸ್ ಕ್ವಾಲಿಟಿ (ASQ ) ಮಾನದಂಡಗಳನ್ನು ಪರಿಗಣಿಸಿ ಈ ಘೋಷಣೆ ಮಾಡಲಾಗಿದೆ.