Publish Date: Mon, 19 Aug 2019 (19:57 IST)
Updated Date: Mon, 19 Aug 2019 (19:59 IST)
ರಾಜಕೀಯದಲ್ಲಿ ಪಕ್ಷಾಂತರ ಸಂದರ್ಭದಲ್ಲಿ ಫೋನ್ ಟ್ಯಾಪಿಂಗ್ ಮಾಡೋದು ಹೊಸದಲ್ಲ ಹಾಗೂ ಅದು ತಪ್ಪು ಅಲ್ಲ. ಹೀಗಂತ ಸುಪ್ರೀಂ ಕೋರ್ಟ್ ಕೆಲವು ಪ್ರಕರಣಗಳಲ್ಲಿ ಹೇಳಿದೆ ಅಂತ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.
ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸೋದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಕಟ ಮಾಡಿದ್ದಾರೆ. ಅದರ ಬೆನ್ನಲ್ಲೇ ಮಾಜಿ ಪಿಎಂ ತಮ್ಮ ಪುತ್ರ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೆಂಬಲಕ್ಕೆ ನಿಂತಿದ್ದಾರೆ.
ಫೋನ್ ಕದ್ದಾಲಿಕೆ ವಿಷಯ ಬಿಟ್ಟು ಪ್ರವಾಹ ಪರಿಸ್ಥಿತಿ ಬಗ್ಗೆ ಮೀಡಿಯಾ ಹೆಚ್ಚು ಗಮನ ಹರಿಸಬೇಕೆಂದು ಮಾಜಿ ಪ್ರಧಾನಿ ಹೇಳಿದ್ರು. ಈ ಪ್ರಕರಣದ ತನಿಖೆಯಿಂದ ಅನಗತ್ಯವಾಗಿ ಸಮಯ ಹಾಳಾಗಲಿದೆ ಅಂತ ಹೇಳಿದ್ರು.