ಪ್ರವಾಹದ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿಗಾಗಿ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಮೃತಪಟ್ಟಿದ್ದಾನೆಂದು ಆತನ ಕುಟುಂಬಕ್ಕೆ ಪರಿಹಾರ ಕೊಡಲೆಂದು ಚೆಕ್ ಕೂಡ ರೆಡಿಯಾಗಿತ್ತು… ಅಷ್ಟರಲ್ಲಿ ಆಗಿದ್ದೇ ಬೇರೆ.
ಚಿಕ್ಕಮಗಳೂರಲ್ಲಿ ಸಂಭವಿಸಿದೆ. ಜು.12ರಂದು ಉಂಡೇ ದಾಸರಹಳ್ಳಿ ರಾಜಕಾಲುವೆಯಲ್ಲಿ ಚಿಂದಿ ಆಯುತ್ತಾ ಹಳ್ಳ ದಾಟುವ ವೇಳೆ ಪತ್ನಿ ಗೀತಾಳ ಕಣ್ಣೆದುರೇ ಗಂಡ ಸೂರಿ ನೀರಲ್ಲಿ ಕೊಂಚಿಕೊಂಡು ಹೋಗಿದ್ದ. ಆತನಿಗಾಗಿ ರಕ್ಷಣಾ ತಂಡ ಎಷ್ಟೇ ಹುಡುಕಾಟ ನಡೆಸಿದರೂ ಸುಳಿವೇ ಸಿಕ್ಕಿರಲಿಲ್ಲ. 'ನನ್ನ ಸೂರಿ ಸಿಕ್ಕುದ್ನಾ ಸಾರ್, ಬೇಗ ಹುಡುಕಿಕೊಡಿ ಅಣ್ಣ. ಸೂರಿಯನ್ನು ಬಿಟ್ಟು ನಾನೊಬ್ಬಳೇ ಎಲ್ಲಿ ಹೋಗಲಿ.' ಎಂದು ಗೀತಾ ಬಿಕ್ಕಿಬಿಕ್ಕಿ ಅಳುತ್ತಾ ಸೆರಗೊಡ್ಡಿ ಅಂಗಲಾಚುತ್ತಿದ್ದ ದೃಶ್ಯ ನೆರೆದಿದ್ದರವ ಕರುಳು ಕಿವುಚಿದ್ದಂತೂ ಸುಳ್ಳಲ್ಲ.
ಎಸ್ಡಿಆರ್ಎಫ್, ಅಗ್ನಿಶಾಮಕ ದಳ, ನಗರಸಭೆ, ಪೊಲೀಸರು, ಸ್ಥಳೀಯರು ಸೂರಿಗಾಗಿ ಶೋಧ ಕಾರ್ಯ ನಡೆಸಿದ್ದರು. ಆತನ ಸುಳಿವೇ ಪತ್ತೆಯಾಗದ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು.