Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪಿಎಸ್​ಐ ಹಗರಣದ ಬಗ್ಗೆ ಕೊನೆಗೂ ಬಾಯಿಬಿಟ್ಟ ಭಾಸ್ಕರ್ ರಾವ್...

ಪಿಎಸ್​ಐ ಹಗರಣದ ಬಗ್ಗೆ ಕೊನೆಗೂ ಬಾಯಿಬಿಟ್ಟ ಭಾಸ್ಕರ್ ರಾವ್...
ಬೆಂಗಳೂರು , ಮಂಗಳವಾರ, 26 ಜುಲೈ 2022 (17:17 IST)
ರಾಜ್ಯದಲ್ಲಿ ನಡೆದಿರುವ ಪಿಎಸ್​ಐ ಹಗರಣ ದಿನಕ್ಕೊಂದು ತಿರುವುಪಡೆಯುತ್ತ, ಬಗೆದಷ್ಟೂ ಆಳ ಎಂಬಂತಾಗುತ್ತಿದ್ದು, ಇದೀಗ ಆ ಸಂಬಂಧವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಹಾಗೂ ಇದೀಗ ಆಪ್​ ಮುಖಂಡರಾಗಿರುವ ಭಾಸ್ಕರ್​ ರಾವ್ ಮಹತ್ವದ ಸಂಗತಿಯೊಂದನ್ನು ಹೇಳಿದ್ದಾರೆ.
 
ಉಡುಪಿಯಲ್ಲಿ ಮಾತನಾಡಿರುವ ಅವರು, ಪಿಎಸ್​ಐ ಹಗರಣದ ಕುರಿತು ನನಗೆ ಮೊದಲೇ ವಾಸನೆ ಇತ್ತು ಎಂಬುದಾಗಿ ತಿಳಿಸಿದ್ದಾರೆ. ನಾನು ಬೆಂಗಳೂರು ನಗರ ಪೋಲಿಸ್ ಆಯುಕ್ತ ಆಗಿದ್ದಾಗ ಅಮೃತ್ ಪೌಲ್ ಮುಂದಿನ ಕಮಿಷನರ್ ಆಗುತ್ತಾರೆ ಎಂಬ ಸುದ್ದಿ ಇತ್ತು. ಆಗಾಗ್ಯೆ ಮುಖ್ಯಮಂತ್ರಿ ಮನೆಗೆ ಬರುವಾಗ ಕೂಡ ನಾನು ಪ್ರಶ್ನೆ ಮಾಡಿದ್ದೆ. ಇದು ಹಗರಣ ಎಂಬುವುದಾಗಿ ನನಗೆ ಮೊದಲೇ ಗೊತ್ತಿತ್ತು ಎಂದಿರುವ ಅವರು, ರಾಜ್ಯಪಾಲರ ಬಳಿಗೆ ಈ ವಿಷಯವನ್ನು ಕೊಂಡೊಯ್ದ ಮೊದಲ ಪಕ್ಷ ಆಮ್​ ಆದ್ಮಿ ಎಂಬುದಾಗಿಯೂ ಅವರು ಹೇಳಿದ್ದಾರೆ.
 
ತನಿಖೆ ಆಗುವವರೆಗೂ ಪರೀಕ್ಷೆ ಮಾಡುವುದಿಲ್ಲ ಎನ್ನುವುದು ತಪ್ಪು ನೀತಿ. ನೀವು ಯುವಜನರಿಗೆ ಮೋಸ ಮಾಡುತ್ತಿದ್ದೀರಿ. ಇಡೀ ಪರೀಕ್ಷೆಯನ್ನೇ ರದ್ದುಗೊಳಿಸಿ ಹೊಸದಾಗಿ ಪರೀಕ್ಷೆಯನ್ನು ನಡೆಸಿ ಎಂದಿರುವ ಅವರು, ಸಿಐಡಿ ಒಳಗೆ ಹೋದ ಮೇಲೆ ಹೋಂ ಮಿನಿಸ್ಟರ್ ಮತ್ತು ಸಿಎಂ ಇನ್ವೆಸ್ಟಿಗೇಶನ್ ಆಫೀಸರ್ ಆಗುತ್ತಾರೆ. ಇದು ನ್ಯಾಯಾಂಗದಲ್ಲಿ ತನಿಖೆ ಆಗಬೇಕು ಎಂದು ನಾನು ಮೊದಲೇ ಆಗ್ರಹ ಮಾಡಿದ್ದೆ. ನ್ಯಾಯಾಂಗ ತನಿಖೆ ಆರಂಭ ಆದ 24 ಗಂಟೆಗಳಲ್ಲಿ ಅಮೃತ್ ಪೌಲ್ ಬಂಧನವಾಗಿದೆ
 

Share this Story:

Follow Webdunia kannada

ಮುಂದಿನ ಸುದ್ದಿ

ವಿನಯ್ ಗುರುಜಿಯಿಂದ ಟ್ರೋಲಿಗರ ಮೇಲೆ ದೂರು...!!!