ಒಂದು ಕಡೆಯಿಂದ ಇನ್ನೊಂದು ಕಡೆ ಟ್ರಾವೆಲ್ ಮಾಡುವಾಗ ಮಾಸ್ಕ್ ಕಡ್ಡಾಯ ಬಳಕೆಗೆ ಸೂಚನೆ ನೀಡಲಾಗಿದೆ.ವಯಸ್ಸಾದವರು , ಸಕ್ಕರೆ ಕಾಯಿಲೆ ಇರುವವರು ಆದಷ್ಟು ಎಚ್ಚರ ವಹಿಸಲು ವೈದ್ಯರು ಸಲಹೆ ನೀಡಿದ್ದಾರೆ.
ಕೆಮ್ಮು, ನೆಗಡಿ, ಜ್ವರ ಇದ್ರೆ ಈಗಿನಿಂದಲೇ ಮಾಸ್ಕ್ ಬಳಸಲು ಸೂಚನೆ ನೀಡಿದ್ದು,ಯಾರಿಗೆ ಕೆಮ್ಮು ಇರತ್ತೆ ಅಂತಹವರ ಹತ್ತಿರ ಹೋಗುವುದು ಅವಾಯ್ಡ್ ಮಾಡುವಂತೆ,ಆದಷ್ಟು ಸಾಮಾಜಿಕ ಅನಂತರ ಕಾಪಾಡಿ ಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದಾರೆ.
ಗುಂಪು ಸೇರುವುದು, ಸುಖಾ ಸುಮ್ಮನೆ ಒಂದೆಡೆ ಸೇರುವುದು ಮಾಡದಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.ವೈರಸ್ ಶರವೇಗದಲ್ಲಿ ಸ್ಪ್ರೆಡ್ ಆಗುತ್ತೆ, ಅದರ ಕಡಿವಾಣಕ್ಕೆ ಮಾಸ್ಕ್ ಬಳಕೆ ಮಾಡಲು ವೈದ್ಯರಾದ ರಿಷಿಕೇಶ್ ಸಲಹೆ ನೀಡಿದ್ದಾರೆ.