Publish Date: Thu, 07 Feb 2019 (15:15 IST)
Updated Date: Thu, 07 Feb 2019 (15:19 IST)
ಸರಣಿ ಕಳ್ಳತನ ಪ್ರಕರಣಗಳು ಮತ್ತೆ ಮುಂದುವರಿದಿರುವುದು ಅಲ್ಲಿನ ಜನರ ನಿದ್ದೆಗೆಡಿಸಿದಂತಾಗಿದೆ.
ರಾಯಚೂರು ನಗರ ವ್ಯಾಪ್ತಿಯಲ್ಲಿ ತಡರಾತ್ರಿ ಮತ್ತೆ ಮೂರು ಕಡೆಗಳಲ್ಲಿ ಸರಣಿ ಕಳ್ಳತನ ಆಗಿವೆ . ಇದು ಜನರಲ್ಲಿ ಆತಂಕ ಮನೆಮಾಡಲು ಕಾರಣವಾಗಿದೆ.
ರಾಯಚೂರು ನಗರದ ಅಸ್ಕಿಹಾಳ ಬಡಾವಣೆಯೊಂದರಲ್ಲಿಯೇ ಮೂರು ಕಡೆ ಕಳ್ಳತನವಾಗಿವೆ. ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿರುವ ಹುಂಡಿ ಒಡೆದು ಸಾವಿರಾರು ರೂ. ನಗದು ದೋಚಿ ಪರಾರಿಯಾಗಿದ್ದರೆ, ಮತ್ತೊಂದೆಡೆ ಮುಖ್ಯ ರಸ್ತೆಯಲ್ಲಿರುವ ಬಾರ್ & ರೆಸ್ಟೋರೆಂಟ್ನಲ್ಲಿಯೂ ಕಳ್ಳತನವಾಗಿದೆ.
ಕಳೆದ ವರ್ಷ ನಗರದ ಪ್ರಮುಖ ಬಡಾವಣೆ ಮತ್ತು ಕೈಗಾರಿಕೋದ್ಯಮ ಪ್ರದೇಶದಲ್ಲಿ ಕಳ್ಳತನ ಪ್ರಕರಣ ಮಾಸುವ ಮುನ್ನವೇ ರಾತ್ರಿ ಏಕಕಾಲಕ್ಕೆ ಅಸ್ಕಿಹಾಳ ಬಡಾವಣೆಯಲ್ಲಿ ಕಳ್ಳತನವಾಗಿರುವುದರಿಂದ ಜನರು ಭಯಭೀತರಾಗಿದ್ದಾರೆ.
ಘಟನೆ ನಡೆದಿರುವ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ತಂಡ ಭೇಟಿ ನೀಡಿ ನೀಡಿ ಪರಿಶೀಲಿಸಿದೆ.