Publish Date: Mon, 05 Sep 2022 (11:08 IST)
Updated Date: Mon, 05 Sep 2022 (11:27 IST)
ಬೆಂಗಳೂರು : ಚಾಮರಾಜಪೇಟೆಯಲ್ಲಿ ಗಣೇಶನ ಗಲಾಟೆ ನಿಲ್ಲುವಂತೆ ಕಾಣುತ್ತಿಲ್ಲ.
ಶಾಸಕ ಜಮೀರ್ ಅಹ್ಮದ್ ಖಾನ್ ಕಚೇರಿಯಲ್ಲಿ ಇಂದು ಗಣೇಶೋತ್ಸವ ನಡೆಸಲು ಮುಂದಾಗಿದ್ದು, ಇದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು ಜಮೀರ್ ಅಹ್ಮದ್ ಖಾನ್ ಅವರು ಇಂದು ಗಣೇಶ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ. ಚಾಮರಾಜಪೇಟೆಯ ವರ್ತಕರ ಬೀದಿ 4ನೇ ಮುಖ್ಯರಸ್ತೆಯಲ್ಲಿರುವ ತಮ್ಮ ಕಛೇರಿಯಲ್ಲಿ ಬೆಳಗ್ಗೆ 9.15 ರಿಂದ 10 ಗಂಟೆಯೊಳಗಿನ ಶುಭಲಗ್ನದಲ್ಲಿ ವಿದ್ಯಾಗಣಪತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸಿದ್ದಾರೆ.
ತಮ್ಮ ಕಛೇರಿಯಲ್ಲೇ ಲೈಟಿಂಗ್ಸ್, ಫ್ಲೆಕ್ಸ್ ಎಲ್ಲವನ್ನು ಸಿದ್ದಪಡಿಸಿರುವ ಜಮೀರ್, ಸಂಜೆ 4 ಗಂಟೆಗೆ ಅದ್ಧೂರಿ ಮೆರವಣಿಗೆ ಮೂಲಕ ಗಣಪತಿ ಮೂರ್ತಿ ವಿಸರ್ಜನೆ ಮಾಡಲಿದ್ದಾರೆ.