Publish Date: Wed, 08 Apr 2020 (11:29 IST)
Updated Date: Wed, 08 Apr 2020 (11:31 IST)
ಚಿಂತಾಮಣಿ: ಲಾಕ್ ಡೌನ್ ಹಿನ್ನೆಲೆ ಈಗ ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬೀಳುತ್ತಿದ್ದಾರೆ. ಹಾಲು, ದಿನಸಿ ವಸ್ತುಗಳ ಖರೀದಿಗಾಗಿ ಜನ ಲಾಕ್ ಡೌನ್ ಉಲ್ಲಂಘಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಜನಜಂಗುಳಿ ಉಂಟಾಗಿದೆ.
ಚಿಂತಾಮಣಿ ಟೌನ್ ನಲ್ಲಿರುವ ಎಪಿಎಂಸಿ ಮಾರ್ಕೆಟ್, ಹೋಟೆಲ್ ಸ್ಟ್ರೀಟ್ ಸೇರಿದಂತೆ ವಿವಿಧೆಡೆ ಜನಜಂಗುಳಿ ಸೇರಿದ್ದಾರೆ.ದಿನಸಿ ಅಂಗಡಿಗಳ ಬಳಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನ ಸೇರಿದ್ದಾರೆ.ಎಲ್ಲರ ಗುಂಪು, ಗುಂಪಾಗಿ ಬಂದು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.ಪೊಲೀಸರ ಸೂಚನೆಗೆ ಚಿಂತಾಮಣಿಯಲ್ಲಿ ಡೋಂಟ್ ಕೇರ್ ಎನ್ನುತ್ತಿದ್ದಾರೆ.