ಭೋಪಾಲ್: ಕೊರೋನಾ ಹರಡುವಿಕೆ ಕುರಿತು, ಸಿಎಎ ಕಾಯಿದೆ ವಿರೋಧಿಸುವ ಸಂದರ್ಭ ಹಿಂದೂ ಮತ್ತು ಮುಸ್ಲಿಮ್ ಧರ್ಮೀಯರ ನಡುವೆ ಅಶಾಂತಿ ಸೃಷ್ಟಿಯಾಗಿರಬಹುದು. ಆದರೆ ಎಲ್ಲಾ ಕಡೆ ಹೀಗಿಲ್ಲ ಎನ್ನುವುದಕ್ಕೆ ಇಂಧೋರ್ ನಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ.
ಮಧ್ಯಪ್ರದೇಶದ ಇಂಧೋರ್ ನಲ್ಲಿ ಹಿಂದೂ ಮಹಿಳೆಯೊಬ್ಬರ ಅಂತ್ಯ ಸಂಸ್ಕಾರಕ್ಕೆ ಮುಸ್ಲಿಮರು ನೆರವಾದ ಘಟನೆ ನಡೆದಿದೆ. ಲಾಕ್ ಡೌನ್ ನಿಂದಾಗಿ ಹಿಂದೂ ಮಹಿಳೆಯ ಬಾಂಧವರಿಗೆ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ‍್ಯವಾಗಿರಲಿಲ್ಲ.
ಹೀಗಾಗಿ ನೆರೆಯ ಮುಸ್ಲಿಮರು ಮಹಿಳೆಯ ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯುವುದರಿಂದ ಹಿಡಿದು ಎಲ್ಲಾ ರೀತಿಯ ಕ್ರಿಯಾವಿಧಿಗಳನ್ನು ಮಾಡಲು ನೆರವು ನೀಡಿದ್ದಾರೆ. ಈ ಘಟನೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.