ನಗರದ ಅಂಡರ್ ಪಾಸ್ ಗಳು ಎಷ್ಟು ಸೇಫ್ ? ಅನ್ನುವ ಪ್ರಶ್ನೆ ಶುರುವಾಗಿದೆ.ಮುಂದಿನ 3-4 ದಿನಗಳ ಕಾಲ ಸಿಲಿಕಾನ್ ಸಿಟಿ ಬೆಂಗಳೂರು ಡೇಂಜರ್ ಝೋನ್ ನಲ್ಲಿರಲಿದೆ.ಮನೆಯಿಂದ ಹೊರಬರುವಮುನ್ನ ಜನಗಳೇ ಕೊಂಚ ಎಚ್ಚರ.ನೀವು ಓಡಾಡುವ ರಸ್ತೆಗಳು ಅಂಡರ್ ಪಾಸ್ ಗಳು ಎಷ್ಟರ ಮಟ್ಟಿಗೆ ಸೇಫ್ ಗೊತ್ತಾ.ಕೊಂಚ ಮಳೆ ಬಂದರು ಸೇಫ್ ಅಲ್ಲ ಸಿಲಿಕಾನ್ ಸಿಟಿ ರಸ್ತೆಗಳು.ಮಳೆ ಬಂದಾಗ ನಗರದಲ್ಲಿನ ರಸ್ತೆಗಳು ಅಂಡರ್ ಪಾಸ್ ಗಳು ಕೆರೆಗಳಾಗಿ ನಿರ್ಮಾಣವಾಗುತ್ತದೆ.ನಗರದಲ್ಲಿನ ಡೆಡ್ಲಿ ಗುಂಡಿಗಳು ನಿಮ್ಮ ಜೀವ ಪಡೆಯಲು ಬಾಯ್ ತೆರೆದು ನಿಂತಿವೆ.ಮಳೆಯಿಂಅಗಿ ಎಷ್ಟೇ ಅವಘಡಗಳು ನಡೆದರು ಬಿಬಿಎಂಪಿ ಅಧಿಕಾರಿಗಳು ಡೋಂಟ್ ಕೇರ್ ಅನ್ನುತ್ತಿದ್ದಾರೆ.ಕೆಲವು ತಿಂಗಳ ಹಿಂದೆ ಅಷ್ಟೇ ಅಂಡರ್ ಪಾಸ್ ನಲ್ಲಿ ಮಹಿಳೆ ಯೊಬ್ಬಳು ಸಾವಿಗೀಡಾಗಿದ್ದಳು.ವಿಧಾನಸೌಧದ ಪಕ್ಕದಲಿರುವ ರಸ್ತೆಯಲ್ಲೇ ಘಟನೆ ನಡೆದಿತ್ತು.ಆದರೂ ಬಿಬಿಎಂಪಿ ಅಧಿಕಾರಿಗಳು ಎಚ್ಚೇತ್ತುಕೊಂಡಿಲ್ಲ.ನಿನ್ನೆ ಸುರಿದ ಮಳೆಗೆ ಮತ್ತೆ ಸಂಪೂರ್ಣವಾಗಿ ಅಂಡರ್ ಪಾಸ್ ಗಳು ಹಾಗೂ ರಸ್ತೆಗಳು ಜಲಾವೃತ್ತವಾಗಿದೆ.