ಅಲ್ಲಿನ ಜನರು ಈ ಪ್ರಾಣಿಯನ್ನು ಕಂಡದ್ದೇ ತಡ ಬೆಚ್ಚಿ ಬೀಳೋಕೆ ಶುರುಮಾಡಿದ್ದಾರೆ.
ಚಿರತೆ ಪ್ರತ್ಯಕ್ಷವಾಗಿರೋದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮಂಡ್ಯ ಸಮೀಪದ ಬೋರಾಪುರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.
ಮಾರ್ಗೋನಹಳ್ಳಿ ಸುರೇಶ್ ಅವರ ಗದ್ದೆಯಲ್ಲಿ ಕಾರ್ಮಿಕ ಬೋರಾಪುರ ಗ್ರಾಮದ ಅಣ್ಣಪ್ಪ ಎಂಬುವರ ಕಬ್ಬು ಕಟಾವು ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಚಿರತೆ ಕಂಡು ಬಂದಿದ್ದು ಆತಂಕವಾಗಿದೆ.
ಕಳೆದ 15 ದಿನದ ಹಿಂದೆ ಚಿರತೆ ಒಂದು ಕುರಿಯನ್ನ ತಿಂದು ಹಾಕಿತ್ತು. ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಗ್ರಾಮಸ್ಥರು ಭಯದಲ್ಲಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಉಪ ವಲಯಾರಣ್ಯ ಅಧಿಕಾರಿ ಸುರೇಶ್, ಅರಣ್ಯ ರಕ್ಷಕ ಶಿವಕುಮಾರ್ ಭೇಟಿ ನೀಡಿದ್ರು. ಚಿರತೆ ಬಂಧನಕ್ಕೆ ಬೋನ್ ಇಡೋದಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ.