Publish Date: Thu, 26 Sep 2019 (09:30 IST)
Updated Date: Thu, 26 Sep 2019 (09:33 IST)
ನವದೆಹಲಿ: ಭಾರತದ ಗಣ್ಯ ವ್ಯಕ್ತಿಗಳ ಪೈಕಿ ಜನರು ಹೆಚ್ಚು ಇಷ್ಟಪಡುವವರು ಯಾರು ಗೊತ್ತೇ? ಪ್ರಧಾನಿ ಮೋದಿಯಂತೆ. ಆದರೆ ಮೋದಿಯ ನಂತರದ ಸ್ಥಾನದಲ್ಲಿರುವ ಸೆಲೆಬ್ರಿಟಿ ಎಂದರೆ ಅದು ಹಿರಿಯ ಕ್ರಿಕೆಟಿಗ ಧೋನಿ!
ಯು ಗವ್ ಸಂಸ್ಥೆ 41 ದೇಶಗಳ ಸುಮಾರು 42 ಸಾವಿರಕ್ಕೂ ಅಧಿಕ ಮಂದಿಯನ್ನು ಸಮೀಕ್ಷೆ ನಡೆಸಿ ಈ ಫಲಿತಾಂಶ ನೀಡಿದೆ. ಪುರುಷರ ಮತ್ತು ಮಹಿಳೆಯರ ಎರಡು ವಿಭಾಗದಲ್ಲಿ ಸಮೀಕ್ಷೆ ನಡೆಸಿರುವ ಸಂಸ್ಥೆ ಪುರುಷರ ವಿಭಾಗದಲ್ಲಿ ಜಾಗತಿಕವಾಗಿ ಬಿಲ್ ಗೇಟ್ಸ್ ಅತ್ಯಂತ ಪ್ರೀತಿಪಾತ್ರ ನಾಯಕ ಎಂಬ ಅಂಶ ಹೊರಹಾಕಿದೆ.
ಭಾರತೀಯರ ಪೈಕಿ ಈ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ ಮೊದಲ ಸ್ಥಾನವಿದ್ದರೆ, ಧೋನಿ ನಂತರದ ಸ್ಥಾನದಲ್ಲಿದ್ದಾರೆ. ಮೋದಿಗೆ ಶೇ. 15.56 ಮತಗಳು ಬಂದರೆ ಧೋನಿಗೆ 8.58 ಮತಗಳು ಬಂದಿವೆ. ಮಹಿಳೆಯರ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿರುವ ಮಹಿಳೆ ಎಂದರೆ ಬಾಕ್ಸರ್ ಮೇರಿ ಕೋಮ್. ಬಳಿಕ ಕಿರಣ್ ಬೇಡಿ, ಸುಷ್ಮಾ ಸ್ವರಾಜ್, ಲತಾ ಮಂಗೇಶ್ಕರ್, ದೀಪಿಕಾ ಪಡುಕೋಣೆ ಮತ್ತಿತರರೂ ಸ್ಥಾನ ಪಡೆದಿದ್ದಾರೆ.