Publish Date: Sun, 13 Feb 2022 (15:02 IST)
Updated Date: Sun, 13 Feb 2022 (15:05 IST)
ದುರಸ್ತಿ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಬಂದ್ ಆಗಿರುವ ತುಮಕೂರು ರಸ್ತೆ ಫ್ಲೈ ಓವರ್ ಸದ್ಯಕ್ಕೆ ಓಪನ್ ಆಗುವುದಿಲ್ಲ. ದೆಹಲಿಯ ಅನ್ ತಜ್ಞರಿಂದ ಫ್ಲೈಓವರ್ ಓಪನ್ಗೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮ ಲ್ ಪಂತ್ ಮಾಹಿತಿ ನೀಡಿದ್ದಾರೆ.
ವಾರದ ಆರಂಭದಲ್ಲಿ ಫ್ಲೈ ಓವರ್ ಮೇಲೆ ಲೋಡ್ ಟೆಸ್ಟಿಂಗ್ ನಡೆಸಲಾಗಿತ್ತು. ಇದೇ ವೇಳೆ ದೆಹಲಿ ಯಿಂದ ತಜ್ಞರ ತಂಡ ಆಗಮಿಸಿ ಫ್ಲೈ ಓವರ್ ಪರಿಶೀಲಿಸಿದ್ದಾರೆ. ಫ್ಲೈ ಓವರ್ ಅನ್ನು ವಾಹನ ಸಂಚಾರಕ್ಕೆ ಓಪನ್ ಮಾಡಲು ಅನುಮತಿ ನೀಡಿಲ್ಲ. ಪೊಲೀಸರು ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದಾರೆ. ಫ್ಲೈ ಓವರ್ ಓಪನ್ ಆಗುವವರೆಗೆ ಸಾರ್ವಜನಿಕರು ಮತ್ತು ವಾಹನ ಸವಾರ ರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.