ನಾಗರ ಪಂಚಮಿ ಪ್ರಯುಕ್ತ ಚೇಳುಗಳಿಗೆ ಪೂಜೆ ನಡೆಯುತ್ತದೆ. ಜಾತ್ರೆ ಯಲ್ಲಿ ಚೇಳುವಿಗೆ ಪೂಜೆ ಮಾಡಲಾಗುತ್ತೆ. ಜನರು ಇಲ್ಲಿರುವ ಚೇಳುಗಳನ್ನ ಕೈಯಲ್ಲಿ ಹಿಡಿದು ಖುಷಿ ಪಡುತ್ತಾರೆ. ಅಲ್ಲದೆ ಅವುಗಳನ್ನ ಮೈಮೇಲೆಲ್ಲಾ ಹಾಕಿಕೊಳ್ಳುತ್ತಾರೆ. ಆದರೂ ಅವು ಯಾರಿಗೂ ಕಚ್ಚುವುದಿಲ್ಲ. ಅದೇ ಇಲ್ಲಿನ ವಿಶೇಷ.
ನಾಗರ ಪಂಚಮಿ ಅಂದ್ರನೇ ಹಳ್ಳಿಗಳ ಕಡೆ ವಿಶೇಷ ಸಡಗರ ಸಂಭ್ರಮ. ನಾಗರ ಹುತ್ತಕ್ಕೆ ಹಾಲು ಎರೆಯುವುದು ವಿಶೇಷ. ಆದರೆ ಇಲ್ಲೊಂದು ಗ್ರಾಮದಲ್ಲಿ ನಾಗರ ಪಂಚಮಿ ಪ್ರಯುಕ್ತ ಚೇಳುಗಳಿಗೆ ಪೂಜೆ ನಡೆಯುತ್ತದೆ. ಇದು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರು ಗ್ರಾಮದ ಗುಡ್ಡದ ಮದ್ಯೆ ಇರುವ ಕೊಂಡಮ್ಮ ದೇವಿ ಜಾತ್ರೆ ನಡೆಯುತ್ತೆ. ಈ ದೇವಿ ಜಾತ್ರೆಯಲ್ಲಿ ಸಾವಿರಾರು ಚೇಳುಗಳು ಇಲ್ಲಿಗೆ ಬಂದು ಸೇರುತ್ತವೆ. ಇಲ್ಲಿ ನಡೆಯುವ ಚೇಳು ಜಾತ್ರೆ ತುಂಬಾ ವಿಶೇಷ.
ಈ ಜಾತ್ರೆ ಯಲ್ಲಿ ಚೇಳುವಿಗೆ ಪೂಜೆ ಮಾಡಲಾಗುತ್ತೆ. ಜನರು ಇಲ್ಲಿರುವ ಚೇಳುಗಳನ್ನ ಕೈಯಲ್ಲಿ ಹಿಡಿದು ಖುಷಿ ಪಡುತ್ತಾರೆ. ಅಲ್ಲದೆ ಅವುಗಳನ್ನ ಮೈಮೇಲೆಲ್ಲಾ ಹಾಕಿಕೊಳ್ಳುತ್ತಾರೆ. ಆದರೂ ಅವು ಯಾರಿಗೂ ಕಚ್ಚುವುದಿಲ್ಲ. ಅದೇ ಇಲ್ಲಿನ ವಿಶೇಷ. ಈ ಜಾತ್ರೆಗೆ ಸುತ್ತಮುತ್ತ ಇರುವ ಜಿಲ್ಲೆಯ ಜನರ ಜೊತೆ ಅಂತರಾಜ್ಯದ ಜನರು ಕೂಡ ಈ ಜಾತ್ರೆಯಲ್ಲಿ ಪಾಲ್ಗೊಂಡು ಕೊಂಡಮ್ಮ ದೇವಿಯ ಜೊತೆ ಚೇಳುಗಳಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನ ಬೇಡಿಕೊಳ್ಳುತ್ತಾರೆ.