ರಾಜ್ಯದಲ್ಲಿ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ.ಚುನಾವಣಾ ದಿನಾಂಕ ನಿಗಧಿಯಾದ ಕ್ಷಣದಿಂದಲೇ ನೀತಿ ಸಂಹಿತೆ ಕೂಡ ಜಾರಿಯಗಲಿದ್ದು,ಎಲ್ಲಾ ಕಡೆಗಳಲ್ಲೂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಯಾಗಿದೆ.
ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಪ್ರಾಧಿಕಾರ ಈ ಹಿಂದೆಯೇ ಎಚ್ಚರಿಕೆ ಯ ಸಂದೇಶ ರವಾನೆಯಾಗಿದ್ದು,ವಾಹನ ಹಾಗೂ ಆಟೋಗಳ ಮೇಲೆ ರಾಜಕೀಯ ನಾಯಕರ ಭಾವಚಿತ್ರ ಮತ್ತು ಪಕ್ಷಗಳ ಚಿಹ್ನೆ ಇರುವ ವಾಹನಗಳು ಪ್ರಚಾರಕ್ಕಿಳಿಬಾರದು.ಕೆಲ ಆಟೋಗಳ ಮೇಲೆ ಇನ್ನೂ ಪಕ್ಷದ ಪೋಸ್ಟರ್ ಕಂಡುಬರುತ್ತಿದೆ.ಜಾಹಿರಾತಿಗಾಗಿ ಆಟೋ ರಿಕ್ಷಾಗಳ ಹಿಂದೆ ಬ್ಯಾನರ್ ಗಳನ್ನು ಹಾಕಿಸಿಕೊಂಡಿದ್ದ ಆಟೋಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತಿತ್ತುಮಇನ್ನು ಕೆಲ ಆಟೋ ಚಾಲಕರಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು,ರಾಜಾರೋಷವಾಗಿ ಪೋಷ್ಟರ್ ಗಳನ್ನು ಹಾಕೊಂಡು ಓಡಾಟ ನಡೆಸ್ತಿದಾರೆ.